ಭಾಷೆಗಳು

ಆಟೊಮೋಟಿವ್ ಪೇಂಟ್ ಗಳು

ಪರಿಚಯ

ಕನ್ಸೈ ನೆರೊಲ್ಯಾಕ್ ಆಟೋ ಓಇಎಮ್ ಗಳು ಮತ್ತು ಬಿಡಿಭಾಗ ಪೂರೈಕೆದಾರರ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಸಂಪೂರ್ಣ ತಾಂತ್ರಿಕ ಸಹಾಯ ಮತ್ತು ಸೇವೆಗಳನ್ನು ಹೊಂದಿರುವ ವ್ಯಾಪಕ ಉತ್ಪಾದನಾ ಸರಣಿಯನ್ನು ನೀಡುತ್ತದೆ. ಎಲ್ಲ ಉತ್ಪಾದನೆಗಳನ್ನು ಇತ್ತೀಚಿನ ಜಾಗತಿಕ ಟ್ರೆಂಡ್ ಗಳನ್ನು ಗಮನದಲ್ಲಿಟ್ಟುಕೊಂಡು ಉತ್ಪಾದಿಸಲಾಗುತ್ತದೆ.

 

ಉತ್ಪಾದನೆಗಳ ಸರಣಿ

ಕನ್ಸೈ ನೆರೊಲ್ಯಾಕ್ ಜಾಗತಿಕ ಆಟೊಮೋಟಿವ್ ಗ್ರಾಹಕರ ಕಟ್ಟುನಿಟ್ಟಾದ ಪರಿಸರ ನಿಯಮಗಳನ್ನು ಅನುಸರಿಸುವುದಕ್ಕಾಗಿ ತನ್ನ ಆಟೊಮೋಟಿವ್ ಕೋಟಿಂಗ್ ಗಳಿಂದ ಎಸ್‌ಓಸಿ ಗಳನ್ನು ತೆಗೆಯುವ ಚಟುವಟಿಕೆಯನ್ನು ಭಾರತದಲ್ಲಿ ಪ್ರಾರಂಭಿಸಿದ ಪ್ರಥಮ ಸಂಸ್ಥೆಯಾಗಿದೆ.

ಉತ್ಪಾದನೆಗಳ ಪಟ್ಟಿ ಈ ಕೆಳಗಿನಂತಿದೆ. ಆದರೆ ಅದು ಮುಗಿಯದ ಪಟ್ಟಿಯಾಗಿದೆ ಏಕೆಂದರೆ ನಾವು ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಹೊಸ ಹೊಸ ಉತ್ಪಾದನೆಗಳನ್ನು ಅಭಿವೃದ್ಧಿಪಡಿಸುತ್ತಲೇ ಇರುತ್ತೇವೆ.

ಕನ್ಸೈ ಪೇಂಟ್ಸ್ ಕಂ. ಜಪಾನ್ ಸಿಇಡಿ ಯಂತಹ ಮೂಲ ತಂತ್ರಜ್ಞಾನಗಳಲ್ಲಿ ಸಂಶೋಧನೆ ನಡೆಸುವಲ್ಲಿ ಪ್ರಥಮ ಸ್ಥಾನದಲ್ಲಿದೆ. ಹಲವಾರು ವರ್ಷಗಳಲ್ಲಿ ಜಗತ್ತಿನಾದ್ಯಂತ ಬೆಲೆ, ಗುಣಮಟ್ಟ ಮತ್ತು ಪರಿಸರ ನಿಯಮಗಳಿಗಳಿಗೆ ಹೊಂದಿಕೊಳ್ಳುವಂತೆ ಮಾಡಲು ಈ ತಂತ್ರಜ್ಞಾನವನ್ನು ನಿರಂತರವಾಗಿ ಅಪ್ ಗ್ರೇಡ್ ಮಾಡಲಾಗುತ್ತಿದೆ.

ಕನ್ಸೈನ ಇತ್ತೀಚಿನ ಉತ್ಪಾದನೆಯು ಅತ್ಯಂತ ಸೂಕ್ತವಾದುದು. ಈ ವಿಷಯವಾಗಿ ಭವಿಷ್ಯದಲ್ಲಿ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸಂಶೋಧನೆ ಮುಂದುವರಿದಿದೆ.

ಈ ಉತ್ಪಾದನೆಯು ಅತ್ಯುತ್ತಮವಾದ ಮತ್ತು ನುಣುಪಾದ ಪದರಿನಂತಹ ನೋಟ ನೀಡುತ್ತದೆ ಮತ್ತು ವಿಶೇಷವಾಗಿ 3 ಹಸಿ ಕೋಟಿಂಗ್ ಸಿಸ್ಟಮ್ ಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಅದನ್ನು ಸಮಾನ ಡಿ ಎಫ್ ಟಿ ವಿತರಣೆಯೊಂದಿಗೆ ಅತ್ಯಧಿಕ ಶಕ್ತಿ ಹೊಂದಿರುವಂತೆ ವಿನ್ಯಾಸಗೊಳಿಸಲಾಗಿದ್ದು, ಕಾರ್ಯಕ್ಷಮತೆಯೊಂದಿಗೆ ಕನಿಷ್ಠ ವೆಚ್ಚ / ಯೂನಿಟ್ ಸಾಧಿಸಲು ವಿನ್ಯಾಸಗೊಳಿಸಲಾಗಿದೆ.

ಈ ಉತ್ಪಾದನೆಯನ್ನು ಶಕ್ತಿಯ ವೆಚ್ಚ ಕಡಿಮೆ ಮಾಡಲು ಮತ್ತು ಉತ್ಪಾದಕತೆಯನ್ನು ಹೆಚ್ಚಸಲು ಕಡಿಮೆ ಡಿಸ್ಪೋಸಿಷನ್ ಸಮಯ (ಸಾಮಾನ್ಯ 180” ಗೆ ಪ್ರತಿಯಾಗಿ 120”) ಮತ್ತು ಅತಿ ಕಡಿಮೆ ಬೇಕಿಂಗ್ (ಸಾಮಾನ್ಯ 175 ಡಿ. ಸೆ. X 15’ ಗೆ ಪ್ರತಿಯಾಗಿ 160 ಡಿ. ಸೆ. X 10’) ನಲ್ಲಿ ಉಪಯೋಗಿಸಬಹುದು.

ಇ-ಕೋಟ್ ನಲ್ಲಿ, ವಿದ್ಯುತ್ ಕ್ಷೇತ್ರದ ಪ್ರಭಾವದಡಿ ಮೆಟಲ್ ಸಬ್ ಸ್ಟ್ರೇಟ್ ಅನ್ನು ಅಕ್ವಿಯಸ್ ಬಾತ್ ಸಲ್ಯೂಶನ್ ದಲ್ಲಿ ಅದ್ದಲಾಗುತ್ತದೆ ಮತ್ತು ಚಾರ್ಜ್ ಮಾಡಿದ ಜೈವಿಕ ಪ್ರೈಮರ್‍ ನಿಂದ ಕೋಟ್ ಮಾಡಲಾಗುತ್ತದೆ.

ಇ-ಕೋಟ್ ನ ವಿಶಿಷ್ಟ ಅನುಕೂಲಗಳು ಇಂತಿವೆ: ಪಿನ್ ಹೋಲ್ ಗಳಿಲ್ಲದೇ ಅಥವಾ ಇತರ ಮೇಲ್ಮೈ ದೋಷಗಳಿಲ್ಲದೇ ಸಮಾನ ಕವರೇಜ್, ಇದರಿಂದ ಕಡಿಮೆ ಪೇಂಟ್ ಬಳಕೆಯಾಗುತ್ತದೆ; ತುದಿಗಳು ರಕ್ಷಿಸಲ್ಪಟ್ಟು ಸವಕಳಿ ತಪ್ಪುತ್ತದೆ; ಬಾಕ್ಸ್ – ಸೆಕ್ಷನ್ ಗಳಂತಹ ಕೋಟಿಂಗ್ / ಆಳದ ಜಾಗಗಳಿಗೆ ಪೇಂಟ್ ಹಚ್ಚಲಾಗುತ್ತದೆ ಇತ್ಯಾದಿ. ಇದೊಂದು ಸಿಂಗಲ್ ಕೋಟ್ ಪರಿಸರ ಸ್ನೇಹಿ ನೀರು ಆಧಾರಿತ ಕೋಟಿಂಗ್ ಸಿಸ್ಟಮ್ ಆಗಿದೆ. ಇ-ಕೋಟ್ ಸಂಪೂರ್ಣವಾಗಿ ಆಟೊಮೇಟೆಡ್ ಆಗಿದ್ದು, ಕಡಿಮೆ ಕೆಲಸಗಾರರು ಬೇಕಾಗುತ್ತಾರೆ ಮತ್ತು ಕಡಿಮೆ ವೆಚ್ಚ ತಗಲುತ್ತದೆ ಜೊತೆಗೆ ಅಧಿಕ ಪೇಂಟ್ ರಿಕವರಿ ರೇಶಿಯೋ (ಅಲ್ಟ್ರಾ ಫಿಲ್ಟ್ರೇಟ್ ಮತ್ತು ರಿವರ್ಸ್ ಓಸ್ಮೋಸಿಸ್ ಸಿಸ್ಟಮ್ ಜೊತೆಗೆ 99.5% ವರೆಗೆ) ಸಂಭವನೀಯತೆ ಇರುತ್ತದೆ.

 

ಉತ್ಪನ್ನ ಶ್ರೇಣಿ

ಸಿಇಡಿ ದಲ್ಲಿ, ನಮ್ಮ ಉತ್ಪನ್ನ ಶ್ರೇಣಿಯು ಇವುಗಳನ್ನು ಒಳಗೊಂಡಿರುತ್ತದೆ

  • ಲೆಡ್-ರಹಿತ ಪಾಲಿಬ್ಯುಟಡೈನ್-ಆಧರಿತ ಎನೊಡಿಕ್ ಎಲೆಕ್ಟ್ರೊ-ಡಿಪೊಸಿಷನ್ ಪ್ರೈಮರ್‍ (ಎಇಡಿ)
  • ಎಪಾಕ್ಸಿ ರೆಸಿನ್ ಆಧರಿತ ಕೆಥೊಡಿಕ್ ಎಲೆಕ್ಟ್ರೊ ಡಿಪೊಸಿಷನ್ ಪ್ರೈಮರ್ (ಸಿಇಡಿ)
  • ಅಕ್ರೈಲಿಕ್ ರೆಸಿನ್ ಆಧರಿತ ಕೆಥೊಡಿಕ್ ಎಲೆಕ್ಟ್ರೊ ಡಿಪೊಸಿಷನ್ ಪ್ರೈಮರ್ (ಎಸಿಇಡಿ)

ಎಸಿಇಡಿ ಉತ್ಪಾದನೆಯು ಮೋಟರ್‍ ಸೈಕಲ್ ಫ್ರೇಮ್ ಗಳ ಕೋಟಿಂಗ್ ಗಾಗಿ ಸಿಂಗಲ್-ಕೋಟ್ ಅಪ್ಲಿಕೇಶನ್ ಸಿಸ್ಟಮ್ ಬಳಕೆಗೆ ಸಂಬಂಧಿಸಿದಂತೆ ಜಗತ್ತಿನಲ್ಲಿಯೇ ಪ್ರಥಮವಾದ್ದರಿಂದ ಸಂಶೋಧನಾ ಪ್ರಶಸ್ತಿ ಪಡೆಯಿತು.

ನಮ್ಮ ಸಿಇಡಿ ದಲ್ಲಿ ಭಾರವಾದ ಲೋಹಗಳಿಲ್ಲ ಮತ್ತು ಆಟೊಮೋಟಿವ್ ಕೈಗಾರಿಕೆಯ ಕಟ್ಟುನಿಟ್ಟಾದ ಪರಿಸರ ನಿಯಮಗಳಿಗೆ ಅನುಗುಣವಾಗಿದೆ.

ಪ್ರೈಮರ್‍ ಸರ್ಫೇಸರ್‍ ಎರಡನೇ ಫಂಕ್ಷನಲ್ ಲೇಯರ್‍ ಆಗಿದ್ದು, ಇ-ಕೋಟ್ ಮತ್ತು ಟಾಪ್ ಕೊಟ್ ಗಳ ನಡುವೆ ಇಂಟರ್‍ ಮಿಡಿಯೇಟ್ ಕೋಟ್ ಆಗಿ ಕೆಲಸ ಮಾಡುತ್ತದೆ. ಇದು ಈ-ಕೋಟ್ ಸ್ಟೋನ್ ಚಿಪ್ ರಕ್ಷಣೆಯನ್ನು ನೀಡುತ್ತದೆ ಮತ್ತು ಪದರನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸುತ್ತದೆ. ಇಂಟರ್‍ ಮಿಡಿಯೇಟ್ ಕೋಟ್ ಗಳು ಓಇ ಉತ್ಪಾದಕರ ಬೇಡಿಕೆಗೆ ತಕ್ಕಂತೆ ಬಿಳಿ, ತಿಳಿ ಬೂದು, ಕಡು ಬೂದು, ಕೆಂಪು, ನೀಲಿ ಮತ್ತು ಇತರ ನಿರ್ದಿಷ್ಟ ಬಣ್ಣಗಳಲ್ಲಿ ಲಭ್ಯವಿರುತ್ತವೆ. ನೀರು ಆಧರಿತ ಡಿಪ್ಪಿಂಗ್ ಪ್ರೈಮರ್ ಗಳನ್ನು ಕೂಡ ಸುರಕ್ಷಿತ ಪರಿಸರದ ದೃಷ್ಟಿಯಿಂದ ಅಭಿವೃದ್ಧಿಪಡಿಸಲಾಗಿವೆ.

ಕನ್ಸೈ ನೆರೊಲ್ಯಾಕ್ ಎಂಟಿ ಚಿಪ್ ಪ್ರೈಮರ್‍ ಗಳು ಮತ್ತು ನಾನ್ ಸ್ಯಾಂಡಿಂಗ್ ಪ್ರೈಮರ್‍ ಗಳು ಮತ್ತು ವೆಟ್ ಆನ್ ವೆಟ್ ಪ್ರೈಮರ್‍ ಗಳಂತಹ ವಿಶೇಷ ಇಂಟರ್‍ ಮಿಡಿಯೇಟ್ ಕೋಟ್ ಗಳನ್ನು ಕೂಡ ಉತ್ಪಾದಿಸುತ್ತದೆ.

ಟಾಪ್ ಕೋಟ್ ಗಳು ಆಟೊಮೋಟಿವ್ ಗಳಲ್ಲಿ ಕೋಟಿಂಗ್ ಸಿಸ್ಟಮ್ ಗೆ ಬಣ್ಣ, ಸೌಂದರ್ಯ ಮತ್ತು ವಾತಾವರಣದಿಂದ ರಕ್ಷಣೆ ನೀಡುತ್ತವೆ. ಕನ್ಸೈ ನೆರೊಲ್ಯಾಕ್ ಗ್ರಾಹಕರ ನಿರ್ದಿಷ್ಟ ತಾಂತ್ರಿಕ ಸೂಚನೆಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ವಿವಿಧ ರೆಸಿನ್ ಬ್ಯಾಕ್ ಬೋನ್ ಆಧರಿತ ಟಾಪ್ ಕೋಟ್ ಗಳನ್ನು ತಯಾರಿಸುತ್ತದೆ. ಇದು ವ್ಯಾಪಕ ಬಣ್ಣಗಳ ಪಿಗ್ಮೆಂಟ್ ಗಳನ್ನು ಮತ್ತು ಎಫೆಕ್ಟ್ ಪಿಗ್ಮೆಂಟ್ ಗಳನ್ನು ಒಳಗೊಂಡಿದ್ದು, ಆಕರ್ಷಕ ನೋಟ ನೀಡುವಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಈ ವಿಭಾಗದಲ್ಲಿ ಕಡು-ಬಣ್ಣ ಮತ್ತು ಮೆಟಲಿಕ್ ಪೇಂಟ್ ಫಿನಿಶ್ ಮಧ್ಯೆ ಸಾಮಾನ್ಯ ವಿಭಿನ್ನತೆಯನ್ನು ಕಂಡುಕೊಳ್ಳಬಹುದು. ವಿವಿಧ ಪ್ರಕಾರದ ಲೋಹದ ಮತ್ತು ಮೈಕಾ ಫಿನಿಶ್ ಗಳು ಲಭ್ಯವಿವೆ.

3 ವೆಟ್ ಕೋಟಿಂಗ್ ಸಿಸ್ಟಮ್ ಗಳಂತಹ ಟಾಪ್ ಕೋಟ್ ಗಳಲ್ಲಿ ಹೊಸ ತಂತ್ರಜ್ಞಾನಗಳು ಲಭ್ಯವಿದ್ದು, ಹಲವಾರು ಆಟೊಮೋಟಿವ್ ಗ್ರಾಹಕರು ಉತ್ಪಾದಕತೆ, ಬೆಲೆಗಳಲ್ಲಿ ಇಳಿಕೆ ಮತ್ತು ಪರಿಸರ ನಿಯಮಗಳನ್ನು ಪಾಲಿಸುವುದಕ್ಕಾಗಿ ಇವುಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ.

ಕ್ಲಿಯರ್‍ ಕೋಟ್ ಪೇಂಟ್ ಸಿಸ್ಟಮ್ ನಲ್ಲಿ ಮೇಲ್ಪದರವಾಗಿದ್ದು ಸೂರ್ಯನ ಬೆಳಕು ಮತ್ತು ಹವಾಮಾನದಿಂದ ರಕ್ಷಣೆ ನೀಡುತ್ತದೆ ಹಾಗೂ ಪಕ್ಷಿಗಳ ಹೇಸಿಗೆಯಂತಹ ಜೈವಿಕ ಪದಾರ್ಥಗಳು ಮತ್ತು ರಾಸಾಯನಿಕ ಪದಾರ್ಥಗಳಿಂದ ಕೂಡ ರಕ್ಷಣೆ ನೀಡುತ್ತದೆ. ಅದು ಕೋಟಿಂಗ್ ಸಿಸ್ಟಮ್ ಗೆ ಕೊರೆತವಾಗದಂತೆ ರಕ್ಷಿಸುವ ಫೈನಲ್ ಕೋಟ್ ಅನ್ನು ನೀಡುತ್ತದೆ. ಕನ್ಸೈ ನೆರೊಲ್ಯಾಕ್ ಕೊರೆತ ನಿರೋಧಕ, ಅಸಿಡ್ ಮತ್ತು ಅಲ್ಕಲೈ ನಿರೋಧಕ, ಯುವಿ (ಅತಿನೇರಳೆ) ನಿರೋಧಕ, ಹಾನಿ ನಿರೋಧಕ ಇತ್ಯಾದಿಗಾಗಿ ವಿವಿಧ ಕಾರ್ಯಕ್ಷಮತೆಯುಳ್ಳ ಕ್ಲಿಯರ್‍ ಕೋಟ್ ಗಳನ್ನು ನೀಡುತ್ತದೆ.

ಕನ್ಸೈ ನೆರೊಲ್ಯಾಕ್ ಹಲವಾರು ಪ್ರಕಾರದ ಟಚ್ ಪೇಂಟ್ ಗಳನ್ನು ಉತ್ಪಾದಿಸುತ್ತದೆ. ಪೇಂಟ್ ಪದರು ಹಾನಿಗೆ ಒಳಗಾಗಿದ್ದರೆ ಚಿಕ್ಕ ಟಚ್ ಅಪ್ ಗಳನ್ನು ನೀಡುವುದಕ್ಕಾಗಿ ಅವುಗಳನ್ನು ಉಪಯೋಗಿಸಲಾಗುತ್ತದೆ. ಕನ್ಸೈ ನೆರೊಲ್ಯಾಕ್ ಆಟೋ ರೀಫಿನಿಶ್ ಉತ್ಪಾದನೆಗಳ ಸಂಪೂರ್ಣ ಶ್ರೇಣಿಯನ್ನು ನೀಡುತ್ತದೆ. ಇವು ರಿಪೇರ್‍ ಕೋಟಿಂಗ್ ಗಳಿಗಾಗಿ ಇರುವ ಬಾಡಿ ಶಾಪ್ ಗಳ ಸೇವಾ ಅಗತ್ಯಗಳನ್ನು ಪೂರೈಸುತ್ತವೆ.

ಕನ್ಸೈ ನೆರೊಲ್ಯಾಕ್ ಮೋಟರ್‍ ಸೈಕಲ್ ಮಫ್ಲರ್‍ ಗಳ ಒಳ ಮತ್ತು ಹೊರ ಮೇಲ್ಮೈಗಳನ್ನು ಉಷ್ಣ ನಿರೋಧಕವಾಗಿಸುವ ಪೇಂಟ್ ಗಳಂತಹ ವಿಶೇಷ ಪೇಂಟ್ ಗಳನ್ನು ಉತ್ಪಾದಿಸುತ್ತದೆ. ಇವುಗಳು 600 ಡಿ.ಸೆ. ನಷ್ಟು ಅಧಿಕ ತಾಪಮಾನ ತಾಳಿಕೊಳ್ಳುವಂತೆ ತಯಾರಿಸಲಾಗಿರುತ್ತವೆ.

ಕನ್ಸೈ ನೆರೊಲ್ಯಾಕ್ ಆಟೊಮೋಟಿವ್ ವಾಹನಗಳನ್ನು ಸಾಗಿಸುವಾಗ ಅವುಗಳ ಮೇಲಿನ ಪೇಂಟ್ ಪದರ ಮೇಲೆ ಧೂಳು, ರಾಸಾಯನಿಕ ಪದಾರ್ಥಗಳು, ಪಕ್ಷಿಗಳ ಹೇಸಿಗೆ ಮತ್ತು ಹಾನಿ ಆಗದಂತೆ ರಕ್ಷಿಸುವ ರ್‍ಯಾಪ್ ಗಾರ್ಡ್ ಟ್ರಾನ್ಸಿಟ್ ಪ್ರೊಟೆಕ್ಷನ್ ಫಿಲ್ಮ್ ಗಳನ್ನು ಪೂರೈಸುತ್ತದೆ. ಲೋಹದ ಮತ್ತು ಪ್ಲಾಸ್ಟಿಕ್ ಮೇಲ್ಮೈಗಳನ್ನು ರಕ್ಷಿಸುವ ಪದರುಗಳು ಲಭ್ಯವಿವೆ.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ