ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ಟ್ರೆಂಡ್ ಗಳು

ಆಟೊಮೋಟಿವ್ ಕೋಟಿಂಗ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನೆರೊಲ್ಯಾಕ್ ಅತ್ಯಧಿಕ ನಿಪುಣತೆ ಮತ್ತು ಶ್ರೇಷ್ಠ ಮಟ್ಟದ ವಿಶೇಷತೆಯನ್ನು ಹೊಂದಿದೆ. ಉಪಯೋಗಿಸುವ ರಾಸಾಯನಿಕ ಪದಾರ್ಥಗಳು ಮತ್ತು ತಂತ್ರಜ್ಞಾನದಿಂದ ಹಿಡಿದು ಅನುಸರಿಸುವ ಟ್ರೆಂಡ್ ಗಳವರೆಗೆ, ನಮ್ಮ ಉತ್ಪಾದನೆಗಳು ಈ ಕ್ಷೇತ್ರದಲ್ಲಿ ಅತ್ಯುತ್ತಮವಾಗಿವೆ.

ಶ್ರೇಷ್ಠ ತಂತ್ರಜ್ಞಾನ ಉತ್ಪಾದನೆಗಳು

ಕನ್ಸೈ ನೆರೊಲ್ಯಾಕ್ 3 ಕೋಟ್ 1 ಬೇಕ್ ತಂತ್ರಜ್ಞಾನದ ಇತ್ತೀಚಿನ ಪೀಳಿಗೆಯನ್ನು ಭಾರತದಲ್ಲಿ ಪರಿಚಯಿಸಿದೆ. ಟಾಪ್ ಕೋಟ್ ಸಿಸ್ಟಮ್ ನ ಸಾಲ್ವಂಟ್-ಆಧರಿತ 3ಸಿ-1ಬಿ 2006 ರಿಂದ ಭಾರತದಲ್ಲಿ ಬಳಕೆಯಲ್ಲಿದೆ. ಅಲ್ಲಿಯವರೆಗೆ ಹಲವಾರು ಯೋಜನೆಗಳು ಈ ಸಿಸ್ಟಮ್ ಅನ್ನು ಪರಿಚಯಿಸುವ ನಿರ್ಣಯ ಮಾಡಿವೆ.

(ಜಪಾನ್) ಚಿಕ್ಕ ಕಾಂಪ್ಯಾಕ್ಟ್ ಕಾರುಗಳ ತಯಾರಕರು ವಿಓಸಿ ಕಡಿಮೆ ಮಾಡಲು 3ಸಿ-1ಬಿ (ನೀರು ಆಧರಿತ) ಕೋಟಿಂಗ್ ಅನ್ನು ಪರಿಚಯಿಸಿದರು.

ಆಟೊಮೋಟಿವ್ ಕೋಟಿಂಗ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ನೆರೊಲ್ಯಾಕ್ ಅತ್ಯಧಿಕ ನಿಪುಣತೆ ಮತ್ತು ಶ್ರೇಷ್ಠ ಮಟ್ಟದ ವಿಶೇಷತೆಯನ್ನು ಹೊಂದಿದೆ. ಆಟೊಮೋಟಿವ್ ಕೈಗಾರಿಕೆಯಲ್ಲಿ ಬೇಕಾಗುವ ಅಗ್ಗದ ಉತ್ಪಾದನೆಗಳಿಂದ ಹಿಡಿದು ಅತ್ಯುನ್ನತ ತಂತ್ರಜ್ಞಾನಗಳವರೆಗೆ, ನಮ್ಮ ಉತ್ಪಾದನೆಗಳು ಸರ್ವಶ್ರೇಷ್ಠವಾಗಿವೆ.

 

ನವಿರಾದ ಅನುಭವ ನೀಡುವ ಕೋಟಿಂಗ್ ಗಳು

ಅಧಿಕ ಮ್ಯಾಟ್ ಮಾಡಲಾದ, ಪ್ರತಿಫಲಿಸದ ಮತ್ತು ವೆಲ್ವೆಟ್, ಲೆದರ್‍ ಅಥವಾ ರೇಷ್ಮೆಯಂತೆ ಕಾಣುವ ನವಿರಾದ ಅನುಭವ ನೀಡುವ ಕೋಟಿಂಗ್ ಗಳನ್ನು ನೀಡುತ್ತೇವೆ.

ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಕನ್ಸೈ ನೆರೊಲ್ಯಾಕ್ ನ ಸಾಫ್ಟ್ ಫೀಲ್ ಕೋಟಿಂಗ್ ಗಳು ವಿವಿಧ ಪ್ರಕಾರದ ಉಪಾಯಗಳನ್ನು ನೀಡುತ್ತವೆ. ನಮ್ಮ ಉತ್ಪಾದನೆಗಳು ಗ್ರಾಹಕ ಎಲೆಕ್ಟ್ರಾನಿಕ್ ಕೋಟಿಂಗ್ ಗಳಿಗೆ ಸಂಬಂಧಿಸಿದಂತೆ ಕೆಲವು ಚೌಕಟ್ಟುಗಳನ್ನು ಹಾಕುತ್ತವೆ ಮತ್ತು ವಿನ್ಯಾಸಕಾರರಿಗೆ, ಉತ್ಪಾದಕರಿಗೆ ಮತ್ತು ಕೋಟಿಂಗ್ ಮಾಡುವವರಿಗೆ ಒಟ್ಟು ಫಿನಿಶಿಂಗ್ ಪರಿಹಾರ ನೀಡುತ್ತವೆ. ನಾವು ಒದಗಿಸುವ ಪರಿಹಾರಗಳನ್ನು ಅರಿತುಕೊಳ್ಳಲು, ಪರಿಹಾರಗಳ ಪಟ್ಟಿಯನ್ನು ನೋಡಿ.

 • ಕಾರ್ ಡ್ಯಾಶ್ ಬೋರ್ಡ್ಗಳು
 • ಬಾಳಿಕೆ
 • ವಿದ್ಯುತ್ ಸ್ವಿಚ್ ಗಳು ಮತ್ತು ಸ್ವಿಚ್ ಬೋರ್ಡ್ ಗಳು
 • ರಿಸ್ಟ್ ವಾಚ್ ಗಳ ಸ್ಟ್ರಾಪ್ ಗಳು ಮತ್ತು ಪೆನ್ನುಗಳು
 • ಸೆಲ್ ಫೋನ್ ಗಳು ಮತ್ತು ಐಪಾಡ್ ಗಳು
 • ಟಿವಿ ಕ್ಯಾಬಿನೇಟ್ ಗಳು ಮತ್ತು ರಿಮೋಟ್ ಕಂಟ್ರೋಲ್ ಕೇಸ್ ಗಳು
 • ಕಂಪ್ಯೂಟರ್ ಕೀ ಬೋರ್ಡ್ಗಳು ಮತ್ತು ಮೌಸ್ ಕೇಸ್ ಗಳು
 • ಸನ್ ಗ್ಲಾಸ್ ಗಳು ಮತ್ತು ಕ್ಯಾಮೆರಾಗಳು
 • ಆಡಿಯೋ ಬಿಡಿಭಾಗಗಳು
 • ಬಾಟಲ್ ಮುಚ್ಚಳಗಳು

 

ಕಾಸ್ಟಿಂಗ್ ಗಳಿಗಾಗಿ ಕೋಟಿಂಗ್ ಗಳು

ಕಾಸ್ಟಿಂಗ್ ಗಳನ್ನು ಮೃದು ಉಕ್ಕು, ಅಲುಮಿನಿಯಂ ಮತ್ತು ಅಲಾಯ್ ಗಳಿಂದ ಮಾಡಲಾಗಿರುತ್ತದೆ. ಪೇಂಟಿಂಗ್ ಮಾಡುವ ಮುಂಚೆ ಮೇಲ್ಮೈಯನ್ನು ಸಿದ್ಧಗೊಳಿಸುವಾಗ ಇವು ಭಾರವಾದ ಬ್ಲಾಕ್ ಗಳಾಗಿರುತ್ತವೆ ಮತ್ತು ಶಾಟ್ ಬ್ಲಾಸ್ಟೆಡ್ ಮಾಡಲಾಗುತ್ತದೆ. ಶಾಟ್ ಬ್ಲಾಸ್ಟ್ ಮಾಡಲಾದ ಕಂಪೊನೆಂಟ್ ಗಳು ವಾತಾವರಣದ ಪರಿಸ್ಥಿತಿಗಳಿಗೆ ಸಂವೇದನಾಶೀಲವಾಗಿರುತ್ತವೆ ಮತ್ತು ಬೇಗನೇ ಸವಕಳಿಯಾಗುತ್ತವೆ. ಮೇಲ್ಮೈಯನ್ನು ರಕ್ಷಿಸುವುದಕ್ಕಾಗಿ ಕಾಸ್ಟಿಂಗ್ ಗಳನ್ನು ವಿವಿಧ ಬಣ್ಣದ ಸೀಲರ್ ಕೋಟ್ ಗಳಿಂದ ಪೇಂಟ್ ಮಾಡಲಾಗಿರುತ್ತದೆ. ಈ ಪೇಂಟ್ ಮಾಡಿದ ಕಾಸ್ಟಿಂಗ್ ಗಳನ್ನು ಟ್ಯ್ರಾಕ್ಟರ್ ಕೈಗಾರಿಕೆಗಳು, ಟ್ರಕ್ ಕೈಗಾರಿಕೆಗಳು ಅಥವಾ ಯಂತ್ರದ ಕೈಗಾರಿಕೆಗಳಂತಹ ಮುಖ್ಯ ಬಳಕೆದಾರರಿಗೆ ಸ್ಥಳಾಂತರಿಸಲಾಗುತ್ತದೆ. ಅನಂತರ ಬಳಕೆದಾರರ ಬೇಡಿಕೆಗೆ ತಕ್ಕಂತೆ ಇವುಗಳಿಗೆ ಮತ್ತೊಮ್ಮೆ ಲೋ ಬೇಕ್ ಎನಾಮಲ್, ಪಿಯು ಟಾಪ್ ಕೋಟ್ ಗಳು ಇತ್ಯಾದಿ ವಿವಿಧ ಪ್ರಕಾರದ ಪೇಂಟ್ ಗಳನ್ನು ಹಚ್ಚಲಾಗುತ್ತದೆ.

 

ಇತರ ಕೋಟಿಂಗ್ ಗಳು

 • ಅದ್ಭುತ ಬಾಳಿಕೆಯ ಮೋನೋಕೋಟ್ ಗಳು
 • ಡೈರೆಕ್ಟ್ ಟು ಮೆಟಲ್ ಪೇಂಟ್ ಗಳು
 • ಅದ್ಭುತ ಬಾಳಿಕೆಯ ಕ್ಲಿಯರ್ ಕೋಟ್ ಗಳು
 • ಹೈ ಸಾಲಿಡ್ಸ್ ಪೇಂಟ್ ಗಳು
 • ಪರ್ಲ್ ಫಿನಿಶ್ ಪೇಂಟ್ ಗಳು
 • 2ಸಿ1ಬಿ/3ಸಿ1ಬಿ ತಂತ್ರಜ್ಞಾನ
 • ನೀರು ಆಧರಿತ ಪ್ರೈಮರ್ ಗಳು/ಪೇಂಟ್ ಗಳು
 • ತುಕ್ಕು ತಡೆಯುವ ಪ್ರೈಮರ್ ಗಳು
 • ಉಷ್ಣ ನಿರೋಧಕ ಪೇಂಟ್ ಗಳು
 • ಬೇಗ ಒಣಗುವ ಪೇಂಟ್ ಗಳು

Write To US - Dev

ನಮಗೆ ಬರೆಯಿರಿ

 
1 Start 2 Complete