ಭಾಷೆಗಳು

ತಾಂತ್ರಿಕ ಸೇವೆಗಳು

ಗ್ರಾಹಕರು ಬಳಸುವ ಉತ್ಪಾದನೆಗಳು ಯಾವುದೇ ತೊಂದರೆಯಿಲ್ಲದೇ ಕೆಲಸ ಮಾಡಬೇಕೆಂಬ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಕನ್ಸೈ ನೆರೊಲ್ಯಾಕ್ ತಾಂತ್ರಿಕ ಸೇವಾ ತಂಡವನ್ನು ಮುಂಬೈನ ಲೋವರ್ ಪರೇಲ್ ನಲ್ಲಿರುವ ತನ್ನ ಕೇಂದ್ರೀಯ ಸೇವಾ ತಂತ್ರಜ್ಞಾನ ಪ್ರಯೋಗಾಲಯದಲ್ಲಿ ಸ್ಥಾಪಿಸಿದೆ. ಸ್ಯಾಟಲೈಟ್ ತಂತ್ರಜ್ಞಾನ ಸೇವಾ ಪ್ರಯೋಗಾಲಯಗಳನ್ನು ಬವಾಲ್, ಲೋಟೆ ಮತ್ತು ಹೊಸೂರಿನಲ್ಲಿ ಸ್ಥಾಪಿಸಲಾಗಿದೆ. ಪ್ರೊಡಕ್ಷನ್ ಲೈನ್ ಗಳಿಗೆ ಬೆಂಬಲ ನೀಡುವುದಕ್ಕಾಗಿ 135 ಕ್ಕೂ ಹೆಚ್ಚು ತಾಂತ್ರಿಕ ಸೇವಾ ತಂಡದ ಸದಸ್ಯರನ್ನು ಮುಖ್ಯ ಗ್ರಾಹಕ ಸ್ಥಳಗಳಲ್ಲಿ ಇರಿಸಲಾಗಿದೆ.

ಮುಂಬೈದಲ್ಲಿರುವ ಕೇಂದ್ರೀಯ ತಾಂತ್ರಿಕ ಸೇವಾ ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಅನುಮೋದನೆ ದೊರೆತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಮುಂದುವರಿದ ಗಣಕೀಕೃತ ಟೆಸ್ಟಿಂಗ್ ಉಪಕರಣಗಳನ್ನು ಒಳಗೊಂಡಿರುತ್ತದೆ.
 

ಮೌಲ್ಯ ವರ್ಧನೆ/ಮೌಲ್ಯಯುತ ಎಂಜಿನಿಯರಿಂಗ್ ಚಟುವಟಿಕೆಗಳು

ಕನ್ಸೈ ನೆರೊಲ್ಯಾಕ್ ವೆಚ್ಚ ಮತ್ತು ಶಕ್ತಿ ಬಳಕೆ ಕಡಿತ, ಶಕ್ತಿ ಉಳಿತಾಯ, ಸುರಕ್ಷತೆ ಮತ್ತು ವಾತಾವರಣ ಸುರಕ್ಷತೆ ಇತ್ಯಾದಿಯಂತಹ ವಿವಿಧ ಪ್ರಕಾರದ ವಿಎ/ವಿಇ ಚಟುವಟಿಕೆಗಳನ್ನು ಗ್ರಾಹಕರ ಸಹಯೋಗದೊಂದಿಗೆ ಕೈಗೆತ್ತಿಕೊಳ್ಳುತ್ತದೆ. ಈ ಮೂಲಕ ಸೂಕ್ತ ಪೇಂಟಿಂಗ್ ಪರಿಹಾರಗಳ ಪೂರೈಕೆಯಾಗುತ್ತದೆ. ಅಲ್ಲದೇ ಸಂಸ್ಥೆಯ ಎಲ್ಲ ಕೆಲಸಗಾರರು ತಪ್ಪದೇ ಪಾಲಿಸಬೇಕಾದ ನೀತಿಯಾಗಿ ಕೈಝೆನ್ ಮತ್ತು 5ಎಸ್ ಅನ್ನು ಅಳವಡಿಸಿಕೊಂಡಿದೆ.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ