ಭಾಷೆಗಳು

ಪ್ರಸ್ತುತ ಲಭ್ಯವಿರುವ ಕೆಲಸಗಳು

ನೀವು ಮ್ಯಾನೇಜ್ ಮೆಂಟ್ ಟ್ರೈನಿ ಆಗಿ ಅಷ್ಟೇ ಅಲ್ಲದೇ ಯಾವುದೇ ಮಟ್ಟದಲ್ಲಿ ನೆರೊಲ್ಯಾಕ್ ನೊಂದಿಗೆ ಕೆಲಸ ಮಾಡಬಹುದು. ಈ ಕೆಳಗಿನ ಕೆಲಸಗಳಲ್ಲಿ ನಿಮ್ಮ ವೃತ್ತಿ ಜೀವನ ಪ್ರಾರಂಭಿಸಲು ನಿಮ್ಮನ್ನು ಸ್ವಾಗತಿಸುತ್ತೇವೆ:

ಡೆಕೊರೇಟಿವ್ ಸೇಲ್ಸ್ ಮತ್ತು ಮಾರ್ಕೆಟಿಂಗ್

ಅರ್ಹತೆ:

 • ಯಾವುದೇ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು ಮತ್ತು ಮಾರ್ಕೆಟಿಂಗ್ ನಲ್ಲಿ ವಿಶೇಷ ಜ್ಞಾನವುಳ್ಳ ಮ್ಯಾನೇಜ್ ಮೆಂಟ್ ಸ್ನಾತಕೋತ್ತರ ಪದವಿ ಪಡೆದಿರಬೇಕು.
 • ನೀವು ಗ್ರಾಹಕರ ಡ್ಯೂರೆಬಲ್ಸ್, ಲುಬ್ರಿಕಂಟ್ಸ್, ಪೇಂಟ್ ಗಳು ಅಥವಾ ಸಂಯೋಜಿತ ಉದ್ಯಮಗಳಲ್ಲಿ ಸೇಲ್ಸ್ ಅಥವಾ ಮಾರ್ಕೆಟಿಂಗ್ ನಲ್ಲಿ 2 ವರ್ಷಗಳಿಗಿಂತ ಹೆಚ್ಚು ಅನುಭವ ಹೊಂದಿರಬೇಕು.

 

ಕೈಗಾರಿಕಾ ಸೇಲ್ಸ್ ಮತ್ತು ಮಾರ್ಕೆಟಿಂಗ್

ಅರ್ಹತೆ:

 • ಯಾವುದೇ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ವಿಜ್ಞಾನ ಅಥವಾ ಇಂಜಿನಿಯರಿಂಗ್ ಪದವಿ ಪಡೆದಿರಬೇಕು ಮತ್ತು ಮಾರ್ಕೆಟಿಂಗ್ ನಲ್ಲಿ ವಿಶೇಷ ಜ್ಞಾನವುಳ್ಳ ಮ್ಯಾನೇಜ್ ಮೆಂಟ್ ಸ್ನಾತಕೋತ್ತರ ಪದವಿ ಪಡೆದಿರಬೇಕು.
 • ನೀವು ಕೈಗಾರಿಕಾ ಕ್ಷೇತ್ರದಲ್ಲಿ – ಆಟೋ/ಆಟೋ ಅನ್ಸಿಲರೀಸ್ ಅಥವಾ ಓಇಎಮ್ ಸಂಸ್ಥೆಗಳಲ್ಲಿ ಬಿ ಟು ಬಿ ಸೇಲ್ಸ್ /ತಾಂತ್ರಿಕ ಸೇವೆಗಳಲ್ಲಿ 2 ವರ್ಷಕ್ಕಿಂತ ಹೆಚ್ಚು ಅನುಭವ ಹೊಂದಿರಬೇಕು.

 

ಸಂಶೋಧನೆ ಮತ್ತು ಅಭಿವೃದ್ಧಿ

ಅರ್ಹತೆ:

 • ಸಂಶೋಧನೆಯಲ್ಲಿ ರುಚಿಯುಳ್ಳ ಮತ್ತು ಪೇಂಟ್ ತಂತ್ರಜ್ಞಾನ, ರಾಸಾಯನಿಕ ಇಂಜಿನಿಯರಿಂಗ್ ಮತ್ತು ಸಂಬಂಧಿತ ವಿಷಯಗಳಲ್ಲಿ ಸೂಕ್ತ ಅನುಭವ ಹೊಂದಿದವರಿಗೆ ಆದ್ಯತೆ ಇರುತ್ತದೆ.

 

ಹಣಕಾಸು/ಅಕೌಂಟ್ಸ್/ಕಂಪನಿ ಸೆಕ್ರೆಟರಿಯಲ್

ಅರ್ಹತೆ:

 • ಸಿಎ/ಸಿಎಸ್ ಅಥವಾ ಹಣಕಾಸಿನಲ್ಲಿ ಎಂಬಿಎ ಜೊತೆಗೆ 2 ವರ್ಷಗಳ ಅನುಭವ.
 • ಕಾಸ್ಟಿಂಗ್
 • ಅರ್ಹತೆ:
 • ಐಸಿಡಬ್ಲ್ಯೂಎ ಜೊತೆಗೆ ರಾಸಾಯನಿಕ ಸಂಸ್ಕರಣಾ ಕೈಗಾರಿಕೆಯಲ್ಲಿ ಕಾಸ್ಟಿಂಗ್ ಗೆ ಸಂಬಂಧಿಸಿದಂತೆ ಸ್ವಲ್ಪ ಅನುಭವವಿದ್ದರೆ ಸಾಕು.

 

ಉತ್ಪಾದನೆ /ಸೆಂಟ್ರಲ್ ಇಂಜಿನಿಯರಿಂಗ್

ಅರ್ಹತೆ:

 • ನೀವು ರಸಾಯನಶಾಸ್ತ್ರ, ಪೇಂಟ್ ಗಳ ತಂತ್ರಜ್ಞಾನ, ಕೆಮಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಥವಾ ಇಲೆಕ್ಟ್ರಿಕಲ್ ಇಂಜಿನಿಯರಿಮಗ್ ನಲ್ಲಿ ಪದವಿ ಹೊಂದಿದ್ದು , ಉತ್ಪಾದನೆ ಅಥವಾ ಘಟಕದ ಇಂಜಿನಿಯರಿಂಗ್ ನಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿದ್ದರೆ, ಉತ್ಪಾದನೆ ಮತ್ತು ಇಂಜಿನಿಯರಿಂಗ್ ನಲ್ಲಿ ಅಧಿಕಾರಿಗಳ ಹುದ್ದೆಗೆ ಅರ್ಜಿ ಹಾಕಬಹುದು.

 

ಪೂರೈಕೆ ಸರಪಳಿ/ವಸ್ತುಗಳು/ಎಪಿಓ/ಖರೀದಿ

ಅರ್ಹತೆ:

 • ಪೂರೈಕೆ ಸರಪಳಿ, ವಸ್ತುಗಳ ನಿರ್ವಹಣೆ ಯಲ್ಲಿ ಎಂಬಿಎ ಜೊತೆಗೆ ಒಳ್ಳೆಯ ಇಂಜಿನಿಯರಿಂಗ್ ಪದವಿ ಮತ್ತು ಪೂರೈಕೆ ಸರಪಳಿ ಅಥವಾ ವಸ್ತುಗಳ ನಿರ್ವಹಣೆಯಲ್ಲಿ ಅನುಭವ ನೀವು ನಮ್ಮಲ್ಲಿ ಕೆಲಸ ಗಿಟ್ಟಿಸಬಹುದು. ಇಂಜಿನಿಯರಿಂಗ್ ಪದವಿ ಮತ್ತು ಎಪಿಓ ನಿರ್ವಹಣೆಯಲ್ಲಿ ಅನುಭವ ಕೂಡ ಕೆಲಸಕ್ಕೆ ಅರ್ಹರನ್ನಾಗಿಸುತ್ತದೆ.

 

ಮಾಹಿತಿ ತಂತ್ರಜ್ಞಾನ/ಐಟಿ ಸಪೋರ್ಟ್

ಅರ್ಹತೆ:

 • ನಿಮ್ಮಲ್ಲಿ ಅಗತ್ಯ ಐಟಿ ಕೌಶಲ್ಯಗಳು, ಎಸ್ಎಪಿ ಮಾಡ್ಯೂಲ್ ಗಳ ಬಗ್ಗೆ ಜ್ಞಾನದ ಜೊತೆಗೆ ಶೈಕ್ಷಣಿಕ ಸಾಧನೆ ಮತ್ತು ಲೈವ್ ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ ಅನುಭವವಿದ್ದರೆ ಸಾಕು.

 

ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿ, ಆಡಳಿತ ಸೇವೆಗಳು

ಅರ್ಹತೆ:

 • ಎಚ್‌ಆರ್‍/ಪರ್ಸೊನೆಲ್ ಮ್ಯಾನೇಜ್ ಮೆಂಟ್ ನಲ್ಲಿ ಸ್ನಾತಕೋತ್ತರ ಡಿಪ್ಲೋಮಾ ಜೊತೆಗೆ ಸುಮಾರು 2 ವರ್ಷಗಳ ಅನುಭವ.

ಪ್ರಸ್ತುತ ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.