ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ಆರೋಗ್ಯ ಮತ್ತು ಸುರಕ್ಷತೆ

ಹೆಚ್ಚಿನ ಪೇಂಟ್ ಗಳು ಬೆಂಕಿ ಹೊತ್ತಿಸುವ ಸಾಲ್ವಂಟ್ ಗಳನ್ನು ಒಳಗೊಂಡಿರುತ್ತವೆ. ಅದೇ ಕೆಲವು ಪೇಂಟ್ ಗಳನ್ನು ನುಂಗಿದರೆ ಅಥವಾ ಉಸಿರಾಡಿದರೆ ಚರ್ಮಕ್ಕೆ ಹಾನಿಯಾಗುವ ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಆದ್ದರಿಂದ, ಎರಡು ಪ್ರಧಾನ ಅಪಾಯದ ವರ್ಗಗಳೆಂದರೆ ಆರೋಗ್ಯಕ್ಕೆ ಅಪಾಯ ಮತ್ತು ಅಗ್ನಿ ಹಾಗೂ ಸ್ಫೋಟದ ಅಪಾಯ. ಅವುಗಳನ್ನು ನಿಯಂತ್ರಿಸುವುದು ಮತ್ತು ಸಾಕಷ್ಟು ಮಟ್ಟಿಗೆ ಅಪಾಯವನ್ನು ತಗ್ಗಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ನಮ್ಮ ಪ್ರಯತ್ನವಾಗಿರುತ್ತದೆ.

ಈ ಕೆಳಗಿನ ಕಾರಣಗಳಿಂದಾಗಿ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು:

 • ಸಾಲ್ವಂಟ್ ಗಳು ಮತ್ತು ಥಿನ್ನರ್ ಗಳು: ಪೇಂಟ್ ಹಚ್ಚುವಾಗ ಮತ್ತು ಕ್ಯೂರಿಂಗ್ ವೇಳೆ ಸಾಲ್ವಂಟ್ ಆವಿಯಾಗುವುದನ್ನು ಒಳಗೊಂಡಿರುತ್ತವೆ.
 • ಪೇಂಟ್ ಗಳಲ್ಲಿನ ದ್ರವ ಪದಾರ್ಥಗಳು: ಇವು ವಿಷಕಾರಿಯಾದ ಸಾಲ್ವಂಟ್ ಗಳು, ಬೈಂಡರ್ ಗಳು ಅಥವಾ ಆಡಿಟಿವ್ ಗಳಾಗಿರುತ್ತವೆ
 • ಪೌಡರ್ ಗಳು ಅಥವಾ ಧೂಳು: ಪೇಂಟ್ ಮಾಡಿದ ವಸ್ತುಗಳನ್ನು ಬಿಸಿ ಮಾಡುವಾಗ ಇವು ತಲೆದೋರಬಹುದು ಉದಾ. ಪೇಂಟ್ ಮಾಡಿದ ಶೀಟ್ ಅನ್ನು ಫ್ಲೇಮ್ ಕಟಿಂಗ್ ಮಾಡುವಾಗ ಅಥವಾ ವೆಲ್ಡಿಂಗ್ ಮಾಡುವಾಗ ಅಥವಾ ಸ್ಯಾಂಡಿಂಗ್ ಮಾಡುವಾಗ ಅಥವಾ ಸ್ಪ್ರೇ ಮಿಸ್ಟ್ ವೇಳೆ ಹುಟ್ಟುವ ಪುಡಿಯಲ್ಲಿ ಇರಬಹುದು

ಹೆಚ್ಚಿನ ಸಾಲ್ವಂಟ್ ಗಳು, ದ್ರವರೂಪದ ಪೇಂಟ್ ಗಳು ಮತ್ತು ಪೇಂಟ್-ಡಸ್ಟ್ ವಿಷಕಾರಿಯಾಗಿರುತ್ತವೆ ಹಾಗೂ ನಾವು ಅದಕ್ಕೆ ಎಷ್ಟು ಹೊತ್ತು ಒಡ್ಡಿಕೊಳ್ಳುತ್ತೇವೆ ಎಂಬುದನ್ನು ಅವಲಂಬಿಸಿ ಅವು ಚರ್ಮದ ಮೂಲಕ, ಉಸಿರಾಟದ ಮೂಲಕ ಅಥವಾ ಹೀರಿಕೊಳ್ಳುವಿಕೆ ಮೂಲಕ ದೇಹದ ಮೇಲೆ ಪರಿಣಾಮ ಬೀರಬಹುದು.

ಮುನ್ನೆಚ್ಚರಿಕೆ:

 • ಎಲ್ಲ ಪೇಂಟ್ ಡ್ರಮ್ ಗಳನ್ನು ಉಪಯೋಗಿಸದಿದ್ದಾಗ ಅವುಗಳಿಗೆ ಲೇಬಲ್ ಹಚ್ಚಬೇಕು, ಸೀಲ್ ಮಾಡಬೇಕು ಮತ್ತು ಸರಿಯಾಗಿ ಒಂದೆಡೆ ಇಡಬೇಕು.
 • ಪೇಂಟಿಂಗ್ ಮಾಡುವ ಜಾಗಗಳಲ್ಲಿ ಸರಿಯಾಗಿ ಗಾಳಿ ಬೆಳಕು ಬರುತ್ತಿರಬೇಕು
 • ಅಷ್ಟೊಂದು ಗಾಳಿ ಬೆಳಕು ಬರದ ಜಾಗಗಳಲ್ಲಿ ಹೇಗಾದರೂ ಗಾಳಿ ಬೆಳಕು ಬರುವಂತೆ ನೋಡಿಕೊಳ್ಳಬೇಕು ಅಥವಾ ಶುದ್ಧ ಗಾಳಿ ನೀಡುವ ಮಾಸ್ಕ್ ಗಳನ್ನು ಉಪಯೋಗಿಸಬೇಕು
 • ಪೇಂಟ್ ಗಳನ್ನು ಬೆರೆಸುವಾಗ, ಸ್ಪ್ರೇ ಪೇಂಟಿಂಗ್ ಮಾಡುವಾಗ ಅಥವಾ ಯಾವುದೇ ಬೇರೆ ಕೆಲಸ ಮಾಡುವಾಗ ಬಹಳಷ್ಟು ಧೂಳು ಕಾಣಿಸಿಕೊಳ್ಳುವ ಜಾಗದಲ್ಲಿ ಗಾಗಲ್ ಮತ್ತು ರೆಸ್ಪಿರೇಶನ್ ಮಾಸ್ಕ್ ಗಳನ್ನು ಧರಿಸಿ.
 • ಚರ್ಮ ಸಂಬಂಧಿತ ವಸ್ತುಗಳನ್ನು ನಿರ್ವಹಿಸುವಾಗ ಸೂಕ್ತ ಗ್ಲವ್ಸ್ ಮತ್ತು ಬಟ್ಟೆ ಧರಿಸಿ.
 • ಪೇಂಟ್/ಥಿನ್ನರ್‍ ಮೇಲಿಂದ ಮೇಲೆ ಮತ್ತು ಬಹಳ ಹೊತ್ತು ಚರ್ಮದ ಸಂಪರ್ಕದಲ್ಲಿ ಬರದಂತೆ ನೋಡಿಕೊಳ್ಳಬೇಕು.
 • ಸಾಲ್ವಂಟ್ ನಿಂದ ಕೈ ತೊಳೆದುಕೊಳ್ಳಬೇಡಿ
 • ಪೇಂಟ್ ಅಥವಾ ಥಿನ್ನರ್‍ ಅನ್ನು ತಪ್ಪಿ ನುಂಗಿದರೆ, ತಕ್ಷಣ ಡಾಕ್ಟರ್‍ ಬಳಿ ಹೋಗಿ.
 • ಕಣ್ಣುಗಳು ಕೆಂಪಗಾದರೆ, ಶುದ್ಧ ನೀರಿನಿಂದ ಕಣ್ಣು ತೊಳೆದುಕೊಳ್ಳಿ ಮತ್ತು ಚಿಕಿತ್ಸೆ ಪಡೆಯಿರಿ.
 • ಉಪಯೋಗಿಸುತ್ತಿರುವ ವಸ್ತುವಿನಲ್ಲಿರುವ ವಿಷದ ಪ್ರಮಾಣವನ್ನು ಅರಿತುಕೊಳ್ಳಲು ಮತ್ತು ಅಗತ್ಯವಿರುವ ಸುರಕ್ಷತೆ ಉಪಕರಣಗಳನ್ನು ಅರಿತುಕೊಳ್ಳಲು ಪ್ರತಿಯೊಂದು ವಸ್ತುವಿನ ಎಮ್ ಎಸ್ ಡಿ ಎಸ್ ಓದಿರಿ.

ಕೆಳಗಿನ ಕಾರಣಗಳಿಂದಾಗಿ ಅಗ್ನಿ ಮತ್ತು ಸ್ಫೋಟಕದ ಅಪಾಯ ಉಂಟಾಗಬಹುದು:

 • ಸಂಗ್ರಹಣೆ ಅಥವಾ ಸಾಗಿಸುವ ವೇಳೆ ಬೆಂಕಿಯ ಅಪಾಯ
 • ಹಚ್ಚುವಾಗ ಸ್ಫೋಟಿಸುವ ಅಪಾಯ.

ಹೆಚ್ಚಿನ ಪೇಂಟ್ ಮತ್ತು ಸಾಲ್ವಂಟ್ ಗಳನ್ನು ಬೆಂಕಿಗೆ, ಕಿಡಿಗಳಿಗೆ ಅಥವಾ ಅಧಿಕ ತಾಪಮಾನಕ್ಕೆ ಒಡ್ಡಿದಾಗ ಬೆಂಕಿ ಹೊತ್ತಿಕೊಳ್ಳುವ ಮತ್ತು ಅಧಿಕ ಅಪಾಯ ಉಂಟು ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ.

ಮುನ್ನೆಚ್ಚರಿಕೆ:

 • ಸೂಕ್ತ ಕಂಟೇನರ್‍ ಗಳಲ್ಲಿ ಪೇಂಟ್ ಗಳನ್ನು/ಸಾಲ್ವಂಟ್ ಗಳನ್ನು ಸಂಗ್ರಹಿಸಿಡಿ.
 • ಪೇಂಟ್ ಗಳನ್ನು ಇಟ್ಟಿರುವ, ಬೆರೆಸುವ ಅಥವಾ ಬಳಸುವ ಜಾಗಗಳಲ್ಲಿ ಸಿಗರೇಟು ಬೀಡಿ ಸೇದಬೇಡಿ.
 • ಕೆಲಸದ ಜಾಗದಲ್ಲಿ ಸರಿಯಾಗಿ ಗಾಳಿ ಬೆಳಕು ಬರುವಂತೆ ಮಾಡಿ.
 • ಮುಚ್ಚಿದ ಅಥವಾ ಇಕ್ಕಟ್ಟಾದ ಸ್ಥಳಗಳಲ್ಲಿ ತೇವಾಂಶದ ಪ್ರಮಾಣ ಸ್ಫೋಟಗೊಳ್ಳುವ ಮಿತಿಗಿಂತ ಕಡಿಮೆ ಇರುವಂತೆ ನೋಡಿಕೊಳ್ಳಿ.
 • ಕಿಡಿ ಕಾರದಂತಹ ಸಲಕರಣೆಗಳನ್ನು ಮತ್ತು ವಿದ್ಯುತ್ ಫಿಟ್ಟಿಂಗ್ ಗಳನ್ನು ಉಪಯೋಗಿಸಿ.
 • ಕೆಲಸದ ಜಾಗದಲ್ಲಿರುವ ಎಲ್ಲ ಉಪಕರಣಗಳು, ಮೀಟರ್‍ ಗಳು ಮತ್ತು ಲೈಟ್ ಗಳು ನೆಲದ ಮೇಲಿರುವಂತೆ ನೋಡಿಕೊಳ್ಳಿ ಮತ್ತು ಸ್ಫೋಟಗೊಳ್ಳದ ಲೈಟಿಂಗ್ ಮಾತ್ರ ಉಪಯೋಗಿಸಿ.
 • ಸ್ಟೋರೇಜ್ ಮತ್ತು ಕೆಲಸದ ಜಾಗಗಳಲ್ಲಿ ಸರಿಯಾಗಿ ಕೆಲಸ ಮಾಡುವ ಅಗ್ನಿಶಾಮಕ ಉಪಕರಣಗಳನ್ನು ಇರಿಸಿ.
 • ಮರಳಿನ ಬುಟ್ಟಿ ಅಥವಾ ಯಾವುದೇ ಇತರ ಸೂಕ್ತ ಅಗ್ನಿಶಾಮಕ ಪದಾರ್ಥವನ್ನು ಸಿದ್ಧವಾಗಿಟ್ಟುಕೊಂಡಿರಿ.

ಪೇಂಟ್ ಅಥವಾ ಸಾಲ್ವಂಟ್ ಚೆಲ್ಲಿದ್ದರೆ, ತಕ್ಷಣ ಸ್ವಚ್ಛಗೊಳಿಸಿ ಮತ್ತು ವಿಲೇವಾರಿ ಮಾಡಿ.

Write To US - Dev

ನಮಗೆ ಬರೆಯಿರಿ

 
1 Start 2 Complete