ಭಾಷೆಗಳು

ಹಚ್ಚಲು ಮಾರ್ಗದರ್ಶನ

 • ಈ ಕೆಳಗೆ ತಿಳಿಸಿದ ಪ್ರಾಕೃತಿಕ ಪರಿಸ್ಥಿತಿಗಳಲ್ಲಿ ಪೇಂಟಿಂಗ್ ಅನ್ನು ಮಾಡಲಾಗದು
 • ತಾಪಮಾನ 50ಸೆಂ ಗಿಂತ ಕಡಿಮೆ ಇದ್ದಾಗ
 • ಮೇಲ್ಮೈ ತಾಪಮಾನವು ಇಬ್ಬನಿಯ ಬಿಂದುವಿಗಿಂಗ 30 ಸೆ ಕಡಿಮೆ ಇದ್ದಾಗ
 • ತೇವಾಂಶವು 85% ದಷ್ಟು ಇದ್ದಾಗ
 • ಮೇಲ್ಮೈಗಳ ಮೇಲೆ ಪೇಂಟ್ ಹಚ್ಚುವ ಮುನ್ನ ಅವುಗಳನ್ನು ಹಸಿ ಮಾಡಬೇಕು
 • ಮೇಲ್ಮೈ ತಾಪಮಾನ 500 ಸೆ ಇದ್ದಾಗ

ಪೇಂಟ್ ಗಳನ್ನು ಮತ್ತು ಥಿನ್ನರ್ ಗಳನ್ನು ಪರೀಕ್ಷಿಸುವುದು
ಉತ್ಪಾದಕರು ಸೂಚಿಸಿದಂತಹ ಪೇಂಟ್ ಗಳನ್ನು ಮತ್ತು ಥಿನ್ನರ್ ನಿಮಗೆ ದೊರೆತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಮಿಕ್ಸಿಂಗ್
ನಿರ್ದಿಷ್ಟ ಅನುಪಾತಕ್ಕನುಗುಣವಾಗಿ ಮತ್ತು ಮೆಕ್ಯಾನಿಕಲ್ ಸ್ಟರರ್ ಗಳು ಅಥವಾ ಪೆಡಲ್ ಮಿಕ್ಸರ್ ಗಳ ಸಹಾಯದಿಂದ ಕಂಪೋನೆಂಟ್ ಗಳನ್ನು ಮಿಕ್ಸ್ ಮಾಡಿ. ಪೇಂಟ್ ಮಿಶ್ರಣ ಚೆನ್ನಾಗಿ ಬೆರೆಯುವಂತೆ ಮಾಡಲು ಸಾಕಷ್ಟು ಅಲ್ಲಾಡಿಸಿ.


ಥಿನ್ನಿಂಗ್

ತಾಪಮಾನಕ್ಕೆ ತಕ್ಕಂತೆ ಪೇಂಟ್ ನ ಕಾರ್ಯಕ್ಷಮತೆಯನ್ನು ಸುಧಾರಿಸುವುದಕ್ಕಾಗಿ, ಕೆಲವೊಮ್ಮೆ ಥಿನ್ನಿಂಗ್ ಮಾಡಬೇಕಾಗುತ್ತದೆ. ಅತಿಯಾದ, ನಾಶವಾಗುತ್ತಿರುವ ಫಿಲ್ಮ್ ಅಂಶಗಳು ಮತ್ತು ಹೈಡಿಂಗ್ ಪವರ್ ಅನ್ನು ಗಮನಿಸಬೇಕು.

ಫಿಲ್ಟರಿಂಗ್
ಪೇಂಟ್ ನಲ್ಲಿ ಪದರಿನ ಸಣ್ಣ ತುಣುಕುಗಳಿದ್ದರೆ ಅಥವಾ ಯಾವುದೇ ಚಿಕ್ಕ ಗಂಟುಗಳಿದ್ದರೆ, ಅದನ್ನು 60-100 ಮೆಶ್ ಜೊತೆಗೆ ಬಟ್ಟೆ ಅಥವಾ ವಯರ್ ಫಿಲ್ಟರ್ ಮಾಡಬೇಕು.

ಪಾಟ್ ಲೈಫ್
ಪೇಂಟನ್ನು ಒಮ್ಮೆ ಕಲೆಸಿದ ನಂತರ ಪ್ರತ್ಯೇಕ ಕಂಟೇನರ್ ಗಳಲ್ಲಿ ಎರಡು ಅಥವಾ ಮೂರು ಕಂಪೋನೆಂಟ್ ಗಳಲ್ಲಿ ಪೂರೈಸಲಾದ ಪೇಂಟನ್ನು ಸೂಚಿಸಿದ ಸಮಯಾವಧಿಯಲ್ಲಿ ಉಪಯೋಗಿಸಬೇಕು.

ಓವರ್ ಕೋಟಿಂಗ್ ಇಂಟರ್ವಲ್
ಪೇಂಟ್ ಮೇಲೆ ಓವರ್ ಕೋಟಿಂಗ್ ಮಾಡುವ ಮುಂಚೆ ಉತ್ಪಾದಕರು ತಿಳಿಸಿದಂತೆ ಪೇಂಟ್ ಅನ್ನು ಒಣಗಲು ಬಿಡಬೇಕು.

ಒಣ ಪದರಿನ ದಪ್ಪಳತೆಯನ್ನು ಪರಿಶೀಲಿಸುವುದು
ಒಣ ಪೇಂಟ್ ಕೋಟಿಂಗ್ ಅನ್ನು ಒಣ ಪದರಿನ ದಪ್ಪಳತೆಯ ಮೂಲಕ ಅಳೆಯಬೇಕು. ಅಗತ್ಯವಿರುವ ಕೋಟಿಂಗ್ ದಪ್ಪಳತೆ ಇಲ್ಲದಿದ್ದರೆ, ಗಾಳಿರಹಿತ ಸ್ಪ್ರೇ ಅಥವಾ ಬ್ರಶ್ ಅಥವಾ ರೋಲರ್ ಉಪಯೋಗಿಸಬೇಕು.

ಹಚ್ಚುವುದು

 • ಬ್ರಶಿಂಗ್
  • ಬ್ರಶ್ ಅನ್ನು ಪೇಂಟ್ ನೊಳಗೆ ಆಳವಾಗಿ ಮುಳುಗಿಸಬಾರದು. ಹೀಗೆ ಮಾಡಿದರೆ ಬ್ರಿಸಲ್ ಗಳಲ್ಲಿ ಬಹಳಷ್ಟು ಬಣ್ಣ ತುಂಬಿಕೊಳ್ಳುತ್ತದೆ ಮತ್ತು ಬ್ರಶ್ ಹೀಲ್ ನಲ್ಲಿ ಪೇಂಟ್ ತುಂಬಿಕೊಂಡು ಅದನ್ನು ಸ್ವಚ್ಛಗೊಳಿಸುವುದು ಕಠಿಣವಾಗುತ್ತದೆ.
  • ಪೇಂಟ್ ಹಚ್ಚಬೇಕಾದಾಗ, ಬ್ರಶ್ ಅನ್ನು ಮೇಲ್ಮೈಗೆ ಕೆಲವು ಡಿಗ್ರಿಗಳ ಅಂತರದಲ್ಲಿ ಹಿಡಿದಿರಬೇಕು. ಹಲವಾರು ಸಣ್ಣ ಪ್ರಮಾಣದ ಸ್ಟ್ರೋಕ್ ಗಳು ಕೋಟ್ ಮಾಡಬೇಕಾದ ಮೇಲ್ಮೈಯನ್ನು ಸಾಕಷ್ಟು ಮಟ್ಟಿಗೆ ಆವರಿಸುತ್ತವೆ. ಅನಂತರ ಪೇಂಟನ್ನು ಹರಡಿ ಮೇಲ್ಮೈ ಕವರ್ ಮಾಡುವ ಮೂಲಕ ಒಂದೇ ರೀತಿಯ ಕೋಟಿಂಗ್ ಕೊಡಬೇಕು.
  • ಮೇಲ್ಮೈ ಪೂರ್ತಿ ಪೇಂಟ್ ಆದ ಮೇಲೆ, ಆ ಜಾಗದಲ್ಲಿ ಒಂದೇ ತೆರನಾದ ಪೇಂಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಕ್ರಾಸ್ ಆಕಾರದಲ್ಲಿ ಬ್ರಶ್ ಮಾಡಬೇಕು ಮತ್ತು ಕೊನೆಗೆ ಬ್ರಶ್ ಗುರುತುಗಳನ್ನು ಮತ್ತು ಲ್ಯಾಪ್ಸ್ ಕಾಣದಂತೆ ಮಾಡಲು ಮೃದುವಾಗಿ ಬ್ರಶ್ ಮಾಡಬೇಕು.
  • ಪೇಂಟಿಂಗ್ ಕೆಲಸ ಮುಗಿದ ನಂತರ ಸೂಚಿಸಿದ ಥಿನ್ನರ್ ಗಳಿಂದ ಬ್ರಶ್ ಅನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು.
    
 • ಸ್ಪ್ರೇಯಿಂಗ್
  • ಉಪಯೋಗಿಸಲಾದ ಉಪಕರಣವು ಉದ್ದೇಶಿಸಿದ ಕೆಲಸಕ್ಕೆ ಸರಿಯಾಗಿ ಬಳಕೆಯಾಗಬೇಕು. ಹಚ್ಚಬೇಕಾದ ಪೇಂಟ್ ಅನ್ನು ಸರಿಯಾಗಿ ಅಟಮೈಜ್ ಮಾಡುವಂತಿರಬೇಕು ಮತ್ತು ಸೂಚಿಸಿದಂತೆ ಒತ್ತಡ ನಿಯಂತ್ರಕಗಳು ಮತ್ತು ಮಾಪಕಗಳನ್ನು ಮತ್ತು ಭಾಗಗಳನ್ನು ಹೊಂದಿರಬೇಕು.
  • ಪೇಂಟಿಂಗ್ ಮಾಡುವಾಗ ಮತ್ತು ಪೇಂಟ್ ಅನ್ನು ನಿರಂತರವಾಗಿ ಅಥವಾ ಮಧ್ಯೆ ಮಧ್ಯೆ ಬೆರೆಸುವಾಗ, ಪೇಂಟ್ ಪದಾರ್ಥಗಳನ್ನು ಒಂದೇ ತೆರನಾಗಿ ಬೆರೆಸಿ ಸ್ಪ್ರೇ ಪಾಟ್ ಗಳಲ್ಲಿ ಅಥವಾ ಇತರ ಕಂಟೇನರ್ ಗಳಲ್ಲಿ ಇಡಬೇಕು.
  • ಸ್ಪ್ರೇ ಉಪಕರಣವನ್ನು ಸ್ವಚ್ಛವಾಗಿಡಬೇಕು.
  • ಗಾಳಿ ಇಲ್ಲದ ಸ್ಪ್ರೇ ಪಂಪ್ ನ ಆಂತರಿಕ ಒತ್ತಡವು ಪೈಪ್ ನ ಉದ್ದ, ಹೊರಗಿನ ಉಷ್ಣತೆ ಮತ್ತು ವಸ್ತುವಿನ ದಪ್ಪಳತೆಗೆ ತಕ್ಕಂತೆ ಬದಲಾಗುವುದು. ಪದಾರ್ಥದ ಒಂದೇ ರೀತಿಯ ಅಟಮೈಜೇಶನ್ ಗಾಗಿ ಗಾಳಿಯ ಒತ್ತಡವನ್ನು ಸರಿಹೊಂದಿಸಿಡಬೇಕು.
  • ನುಣುಪಾದ ಮತ್ತು ಒಂದೇ ರೀತಿಯ ಕೋಟಿಂಗ್ ಪಡೆಯುವುದಕ್ಕಾಗಿ ಸ್ಪ್ರೇ ಗನ್ ಅನ್ನು ಮೇಲ್ಮೈಗೆ ಸಮಾನಾಂತರವಾಗಿ ಮತ್ತು ಓರೆಯಾಗಿ ಚಲಿಸಬೇಕು. ಪ್ರತಿಯೊಂದು ಪಾಸ್ ನ ಓವರ್ ಲ್ಯಾಪ್ 50% ವಾಗಿರಬೇಕು.
  • ಸ್ಪ್ರೇ ಮಾಡುವ ಪೇಂಟ್ ಅಥವಾ ಥಿನ್ನರ್ ಅಧಿಕ ಒತ್ತಡದೊಂದಿಗೆ ಹೊರಬರುವ ಕಾರಣ ಅದನ್ನು ಜನರ ಮೆಲೆ ಸ್ಪ್ರೇ ಮಾಡಬೇಡಿ.
  • ಮಲ್ಟಿ-ಕಂಪೋನೆಂಟ್ ಪ್ರಕಾರ ಪೇಂಟ್ ಹಚ್ಚುವುದು ಮುಗಿದ ನಂತರ, ಎಲ್ಲ ಗಾಳಿ ರಹಿತ ಸ್ಪ್ರೇ ಯಂತ್ರಗಳನ್ನು ನಿರ್ದಿಷ್ಟ ಥಿನ್ನರ್ ಗಳಿಂದ ಸರಿಯಾಗಿ ಸ್ವಚ್ಛಗೊಳಿಸಬೇಕು.

ಪದರಿನ (ಫಿಲ್ಮ್) ದಪ್ಪವನ್ನು ನಿಯಂತ್ರಿಸುವುದು
ಸಾಲ್ವಂಟ್ ಆವಿಯಾಗುವುದರ ಪರಿಣಾಮವನ್ನು ಕಡಿಮೆ ಮಾಡುವುದಕ್ಕಾಗಿ ಪೇಂಟ್ ಮಾಡಿದ ಕೆಲವೇ ಸೆಕೆಂಡುಗಳೊಳಗೆ ರೋಲರ್ ಗೇಜ್ ಅಥವಾ ಕೋಂಬ್ ಗೇಜ್ ನಂತಹ ಹಸಿ ಪದರನ್ನು ತಿಳಿಸುವ ಮಾಪಕಗಳನ್ನು ಉಪಯೋಗಿಸಿ ಹಸಿ ಪದರನ್ನು ಅಳೆಯಬೇಕು.

ಒಣಗುವುದು
ಪೇಂಟ್ ಪದರು ಸಂಪೂರ್ಣವಾಗಿ ಒಣಗುವವರೆಗೆ ಯಾವುದೇ ಕೋಟ್ ಮಾಡಿದ ಸಬ್ ಸ್ಟ್ರೇಟ್ ಅನ್ನು ಬಿಡಬೇಕು. ಒಣಗಲು ಸರಿಯಾದ ಅವಕಾಶವಿಲ್ಲದ ಜಾಗಗಳಲ್ಲಿ ಪೇಂಟ್ ಮಾಡಿದಾಗ, ಅಲ್ಲಿ ಗಾಳಿ ಬೆಳಕು ಬರಲು ಅವಕಾಶ ನೀಡುವ ಮೂಲಕ ಅದನ್ನು ಒಣಗಿಸಬೇಕು.

ಪ್ರತಿ ವಾತಾವರಣಕ್ಕೆ ಸೂಚಿಸಲಾದ ಕೋಟಿಂಗ್ ಸಿಸ್ಟಮ್ ಗಳು (ಎಸ್ಎಬಿಎಸ್ ಐಎಸ್ಓ 12944-5 ನ ಸರಿಸುಮಾರು ಹೋಲಿಕೆ)

ಸಬ್ ಸ್ಟ್ರೇಟ್ ಸೂಚಿತ ಸುರಕ್ಷತೆಯ ವಿಧಾನ ಒಟ್ಟು ಡಿಎಫ್ ಟಿ (ಯುಎಮ್) ವಾತಾವರಣ ಸಮಾನ ಸಿಸ್ಟಮ್ ಎಸ್‌ಎಬಿಎಸ್ ಐಎಸ್‌ಓ 12944-5
*C1,10ವ C3,15ವ C5,12ವ
ಉಕ್ಕು ಅಲ್ಕೈಡ್ +ಅಲ್ಕೈಡ್ (ಅಲ್ಕ್+ಅಲ್ಕ್) 70 - 100 *     S1.05
ಉಕ್ಕು ಸತುವಿನ ರಂಜಕ + ಅಲ್ಕೈಡ್ (ಝೆಡ್‌ಎನ್ಪಿಓ4 +ಅಲ್ಕ್) 100 - 125 *      
ಉಕ್ಕು ಎಪಾಕ್ಸಿ +ಎಪಾಕ್ಸಿ (ಇಪಿ+ಇಪಿ) 225 - 275 *     S1.34
ಉಕ್ಕು ಎಪಾಕ್ಸಿ + ಪಾಲಿಯುರೆಥೇನ್ (ಇಪಿ+ಪಿಯು) 150-225   *   S1.27
ಉಕ್ಕು ಎಪಾಕ್ಸಿ + ಎಪಾಕ್ಸಿ + ಪಾಲಿಯುರೆಥೇನ್ 190 - 265   *   S1.34
ಉಕ್ಕು ಎಪಾಕ್ಸಿ ಸತು +ಎಚ್ ಬಿ ಎಪಾಕ್ಸಿ (ಇಪಿ+ಎಚ್ ಬಿ ಇಪಿ) 180 - 220   * * S3.21
ಉಕ್ಕು ಜೈವಿಕವಲ್ಲದ ಸತುವಿನ ಸಿಲಿಕೇಟ್ + ಎಪಾಕ್ಸಿ ಎಮ್‌ಐಓ+ಪಾಲಿಯುರೆಥೇನ್ (ಐಓಝೆಡ್+ಎಮ್‌ಐಓ+ಪಿಯು) 200 - 275     * S7.12
ಉಕ್ಕು ಎಪಾಕ್ಸಿ + ಎಪಾಕ್ಸಿ + ಪಾಲಿಯುರೆಥೇನ್ (ಇಪಿ+ಇಪಿ+ಪಿಯು) 450 - 530     *  
ಉಕ್ಕು ಎಪಾಕ್ಸಿ ಸತು + ಎಪಾಕ್ಸಿ + ಪಾಲಿಯುರೆಥೇನ್ (ಇಪಿ+ಇಪಿ+ಪಿಯು) 195 - 235     * S7.07
ಗ್ಯಾಲ್ವನೈಜ್ ಮಾಡಲಾದ ಉಕ್ಕು ಎಪಾಕ್ಸಿ + ಎಚ್ ಬಿ ಎಪಾಕ್ಸಿ (ಇಪಿ+ಎಚ್ ಬಿ ಇಪಿ) 260 - 320   * * S9.11
ಗ್ಯಾಲ್ವನೈಜ್ ಮಾಡಲಾದ ಉಕ್ಕು ಎಪಾಕ್ಸಿ + ಎಪಾಕ್ಸಿ (ಇಪಿ+ಇಪಿ) 325 - 425   * * S9.12
ಗ್ಯಾಲ್ವನೈಜ್ ಮಾಡಲಾದ ಉಕ್ಕು ಎಪಾಕ್ಸಿ + ಪಾಲಿಉರೆಥೇನ್ (ಇಪಿ+ಪಿಯು) 225 - 275   * * S9.12

 

ಇಎನ್ ಐಎಸ್‌ಓ 12944-2:1998 ನಲ್ಲಿ ವ್ಯಾಖ್ಯಾನಿಸಿದಂತೆ
*ಸಿ1 – ಅತಿ ಕಡಿಮೆ ಸವಕಳಿ ವಾತಾವರಣ
ಸಿ3 – ಮಧ್ಯಮ ಪ್ರಮಾಣದ ಸವಕಳಿ ವಾತಾವರಣ
ಸಿ5ಎಮ್ – ಅತ್ಯಧಿಕ (ಮರಿನ್) ಸವಕಳಿ ವಾತಾವರಣ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ