ಭಾಷೆಗಳು

ತಾಂತ್ರಿಕ ಮಾರ್ಗದರ್ಶಿ

ಉತ್ತಮ ಪದರಿನ ಕ್ಷಮತೆಯನ್ನ ಪಡೆಯಲು ಸೂಕ್ತ ಮೇಲ್ಮೈ ಸಿದ್ಧತೆ ಅತ್ಯಂತ ಮುಖ್ಯವಾಗಿರುತ್ತದೆ. ಹಾಗಾಗಿ ನಾವು ಉಕ್ಕಿನ ಘಟಕಗಳಿಗಾಗಿ ಪ್ರಾರಂಭಿಕ ಮೇಲ್ಮೈ ಸಂಸ್ಕರಣೆ, ಫ್ಯಾಬ್ರಿಕೇಟೆಡ್ ಸ್ಟೀಲ್ ಗಾಗಿ ದ್ವಿತೀಯ ಮೇಲ್ಮೈ ಸಂಸ್ಕರಣೆ ಮತ್ತು ದುರಸ್ತಿ ಪೇಂಟ್ ಹಚ್ಚುವ ಬಗ್ಗೆ ವಿವರಣೆ ನೀಡಿದ್ದೇವೆ.

ಈ ಕೆಳಗಿನ ಪ್ರಾರಂಭಿಕ ಮೇಲ್ಮೈ ಸಂಸ್ಕರಣೆಯನ್ನು ಉಕ್ಕಿನ ಪ್ಲೇಟ್ ಗಳಿಗೆ ನೀಡಬೇಕು.

 • ಸಾಲ್ವಂಟ್ ನಲ್ಲಿ ಅದ್ದಿದ ಸ್ವಚ್ಛ ಬಟ್ಟೆಗಳು ಅಥವಾ ಬ್ರಶ್ ಗಳಿಂದ ಉಕ್ಕನ್ನು ಒರೆಸಿ ಅಥವಾ ಉಜ್ಜಿ ಎಣ್ಣೆ ಅಥವಾ ಗ್ರೀಸ್ ತೆಗೆಯಬೇಕು. ಉಕ್ಕಿಗೆ ಅಂಟಿಕೊಂಟ ಪದಾರ್ಥಗಳನ್ನು ಸಾಲ್ವಂಟ್ ಉಪಯೋಗಿಸಿ ಜೋರಾಗಿ ಉಜ್ಜಿ ತೆಗೆಯಬೇಕು.
 • ಸವಕಳಿ ಉಂಟು ಮಾಡುವಂತಹ ಕ್ಲೋರೈಡ್ ಗಳು ಮತ್ತು ಗಂಧಕಗಳಂತಹ ಉಪ್ಪುಗಳನ್ನು ಸ್ವಚ್ಛ ನೀರಿನಿಂದ ತೊಳೆದು ಉಕ್ಕನ್ನು ಶುದ್ಧವಾಗಿಡಬೇಕು. ಅನಂತರ ಒಣ ಬಟ್ಟೆ ಅಥವಾ ಬಿಸಿ ಗಾಳಿಯಿಂದ ಉಕ್ಕಿನ ಮೇಲಿನ ನೀರು ಮತ್ತು ತೇವವನ್ನು ಒಣಗಿಸಬೇಕು.
 • ಎಲ್ಲ ಮಿಲ್ ಸ್ಕೇಲ್, ತುಕ್ಕು, ರಸ್ಟ್-ಸ್ಕೇಲ್, ಪೇಂಟ್ ಕಲೆಗಳು ಅಥವಾ ಮಲಿನ ಪದಾರ್ಥಗಳನ್ನು ಐಎಸ್ಓ ಮಾನದಂಡಕ್ಕೆ ಅನುಗುಣವಾಗಿರಲು ಗ್ರಿಟ್ ಅಥವಾ ಸ್ಯಾಂಡ್ ಬ್ಲಾಸ್ಟಿಂಗ್ ಮೂಲಕ ತೆಗೆದುಹಾಕಬೇಕು.
 • ಶಾಪ್ ಪ್ರೈಮರ್ ಅನ್ನು ಹಚ್ಚುವ ಮುಂಚೆ, ಧೂಳು, ಮಣ್ಣಿನ ಕಣಗಳು, ಪುಡಿ ಮಾಡಿದ ಉಕ್ಕಿನ ತುಣುಕುಗಳು ಅಥವಾ ಗ್ರಿಟ್ ಮತ್ತು ಇತರ ಎಲ್ಲ ಮಲಿನಕಾರಕಗಳನ್ನು ಮೇಲ್ಮೈನಿಂದ ತೆಗೆಯಬೇಕು. ಈ ಕೆಲಸಕ್ಕಾಗಿ ವ್ಯಾಕ್ಯೂಮ್ ಕ್ಲೀನರ್ ಅಥವಾ ಏರ್ ಬ್ಲೋವರ್ ಉಪಯೋಗಿಸಬೇಕು.

ದೋಷವಿರುವ ಮತ್ತು ಹಾನಿಗೊಳಗಾದ ಜಾಗಗಳನ್ನು ಬ್ಲಾಸ್ಟಿಂಗ್ ಅಥವಾ ಪವರ್ ಟೂಲ್ ಕ್ಲೀನಿಂಗ್ ಉಪಯೋಗಿಸಿ ಸ್ವಚ್ಛಗೊಳಿಸಬೇಕು. ಮುಂದಿನ ಕೋಟ್ ಗಳನ್ನು ಹಚ್ಚುವ ಮುಂಚೆ ಮೇಲ್ಮೈ ಯನ್ನು ಡಿಗ್ರೀಸ್ ಮಾಡುವುದು ಮತ್ತು ತೊಳೆದು ಸ್ವಚ್ಛಗೊಳಿಸುವುದು ಕೂಡ ಅಗತ್ಯವಾಗಿರುತ್ತದೆ. ಹಾಗೆ ಮಾಡಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

 • ಉಕ್ಕಿನ ಮೇಲಿರುವ ಸವಕಳಿಯುಂಟು ಮಾಡುವ ಉಪ್ಪುಗಳು, ಚಾಕ್ ಗಳು, ಗುರುತುಗಳು, ಮಣ್ಣು ಅಥವಾ ಇತರ ಮಲಿನಕಾರಕಗಳು ಮತ್ತು ದೂಷಿತ ಪದಾರ್ಥಗಳನ್ನು ಗಡುಸಾದ ಫೈಬರ್ ಅಥವಾ ವಯರ್ ಬ್ರಶ್ ಅಥವಾ ಎರಡನ್ನೂ ಉಪಯೋಗಿಸಿ ಸ್ವಚ್ಛಗೊಳಿಸುವುದು.
 • ಸಾಲ್ವಂಟ್ ಗಳ ಸಹಾಯದಿಂದ ಅಂಟಿಕೊಂಡಿರುವ ಎಣ್ಣೆ ಮತ್ತು ಗ್ರೀಸ್ ತೆಗೆಯಬೇಕು.
 • ಬ್ಲಾಸ್ಟ್ ಕ್ಲೀನರ್ ಅಥವಾ ಪವರ್ ಟೂಲ್ ಉಪಯೋಗಿಸಿ ವೆಲ್ಡಿಂಗ್ ಮಾಡಿದ ಜಾಗದಲ್ಲಿರುವ ವೆಲ್ಡ್ ಫ್ಲಕ್ಸ್ ಸ್ಲಾಗ್ ಗಳನ್ನು, ವೆಲ್ಡ್ ಮೆಟಲ್ ಸ್ಪ್ಲಾಟರ್ ಗಳನ್ನು, ವೆಲ್ಡ್ ಫ್ಲಕ್ಸ್ ಫ್ಯೂಮ್ ಸಂಗ್ರಹಣೆಗಳನ್ನು, ತುಕ್ಕು ಹಿಡಿದ ಮತ್ತು ಹಾನಿಗೊಂಡ ಪೇಂಟ್ ಪದರುಗಳನ್ನು ತೆಗೆದುಹಾಕಿ.
 • ಧೂಳು, ಮಣ್ಣಿನ ಕಣಗಳನ್ನು ಮತ್ತು ಇತರ ಮಲಿನಕಾರಕಗಳನ್ನು ತೆಗೆಯಲು ವ್ಯಾಕ್ಯೂಮ್ ಕ್ಲೀನರ್ ಉಪಯೋಗಿಸುವುದು.

ಮೇಲ್ಮೈ ಸಿದ್ಧತೆಯ ಗುಣಮಟ್ಟವು ಪೇಂಟ್ ಪದರುಗಳ ಕ್ಷಮತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ, ಪೇಂಟ್ ಮಾಡುವುದನ್ನು ಶುರುಮಾಡುವ ಮುಂಚೆ, ಮೇಲ್ಮೈಯನ್ನು ಸಿದ್ಧಗೊಳಿಸುವ ವಿಧಾನ ಮತ್ತು ಗ್ರೇಡ್ ಎರಡನ್ನೂ ನಿರ್ಧರಿಸುವುದು ಅತಿ ಮುಖ್ಯವಾಗಿರುತ್ತದೆ. ಪ್ರೀ-ಟ್ರೀಟ್ಮೆಂಟ್ ವಿಧಾನದ ಆಯ್ಕೆಯ ಮೇಲೆ ಪ್ರಭಾವ ಬೀರುವ ಕೆಲವು ಅಂಶಗಳು ಈ ಕೆಳಗಿನಂತಿವೆ:

ಮೇಲ್ಮೈನ ಭೌತಿಕ ಮತ್ತು ರಾಸಾಯನಿಕ ಸ್ವಚ್ಛತೆ

 • ಮೇಲ್ಮೈ ಪರಿಸ್ಥಿತಿ
 • ಮೇಲ್ಮೈ ಲಕ್ಷಣ
 • ಪೇಂಟ್ ನ ಲಕ್ಷಣಗಳು
 • ಸುರಕ್ಷತೆಯ ಅಂಶಗಳು
 • ಪರಿಸರೀಯ ಪರಿಸ್ಥಿತಿಗಳು
 • ಲಭ್ಯವಿರುವ ಉಪಕರಣಗಳು
 • ಈ ಮುಂಚೆ ಮಾಡಿದ ಸಂಸ್ಕರಣೆಗಳು

ಪ್ರೀಟ್ರೀಟ್ಮೆಂಟ್ ಮತ್ತು ಪೇಂಟ್ ಸಿಸ್ಟಮ್ ಗಳು ಹೇಗಿರಬೇಕೆಂಬುದನ್ನು ನಿರ್ಧರಿಸುವಾಗ, ಸಾಕಷ್ಟು ಖರ್ಚಾಗುತ್ತದೆ ಎಂಬುದನ್ನು ಮರೆಯಬಾರದು.  

ವಿಧಾನ ಫಲಿತಾಂಶ
ಬ್ಲಾಸ್ಟ್ ಕ್ಲೀನಿಂಗ್ ಸೂಕ್ತ
ಯಾಂತ್ರಿಕ ವಯರ್—ಬ್ರಶಿಂಗ್ ಸ್ವೀಕಾರಾರ್ಹ
ಯಾಂತ್ರಿಕ ಡಿಸ್ಕ್-ಸ್ಯಾಂಡಿಂಗ್ ಸ್ವೀಕಾರಾರ್ಹ
ನೀಡಲ್ ಚಿಪಿಂಗ್ ಒಳ್ಳೆಯದು
ಯಾಂತ್ರಿಕ ಕೆತ್ತುವಿಕೆ/ಸ್ಕ್ರೇಪಿಂಗ್ ಒಳ್ಳೆಯದು
ಹ್ಯಾಂಡ್ ಬ್ರಶಿಂಗ್ ಕಳಪೆ
ಕೈಯಿಂದ ಕೆತ್ತುವುದು/ಸ್ಕ್ರೇಪಿಂಗ್ ಕಳಪೆ
ವಾಟರ್‍-ಜೆಟ್ ಕ್ಲೀನಿಂಗ್ ಸ್ವೀಕಾರಾರ್ಹ
ಸಿಸ್ಟಮ್ (ಎಸ್ ಎಸ್ ಪಿ ಸಿ) (ಎನ್ ಎ ಸಿ ಇ) (ಐಎಸ್‌ಓ) ಬಿಎಸ್:4232-67
ಸಾಲ್ವಂಟ್ ಕ್ಲೀನಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 1 - - -
ಹ್ಯಾಂಡ್ ಟೂಲ್ ಕ್ಲೀನಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 2 - ಎಸ್ ಟಿ-2(ಸರಿಸುಮಾರು) -
ಪವರ್‍ ಟೂಲ್ ಕ್ಲೀನಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 3 - - -
ಫೇಮ್ ಕ್ಲೀನಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 4 - - -
ವೈಟ್ ಮೆಟಲ್ ಬ್ಲಾಸ್ಟಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 5 ಎನ್ ಎ ಸಿ ಇ 1 ಎಸ್‌ಎ-3 1ನೇ ಗುಣಮಟ್ಟ
ಕಮರ್ಷಿಯಲ್ ಬ್ಲಾಸ್ಟಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 6 ಎನ್ ಎ ಸಿ ಇ 3 ಎಸ್‌ಎ-2 3ನೇ ಗುಣಮಟ್ಟ
ಬ್ರಶ್ ಆಫ್ ಬ್ಲಾಸ್ಟಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 7 ಎನ್ ಎ ಸಿ ಇ 4 ಎಸ್‌ಎ-2 -
ಪಿಕ್ಲಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 8 - - -
ವೆದರಿಂಗ್ ಮತ್ತು ಬ್ಲಾಸ್ಟಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 9 - - -
ನಿಯರ್‍ ವೈಟ್ ಮೆಟಲ್ ಬ್ಲಾಸ್ಟಿಂಗ್ ಎಸ್ ಎಸ್ ಪಿ ಸಿ-ಎಸ್ ಪಿ 10 ಎನ್ ಎ ಸಿ ಇ 2 ಎಸ್‌ಎ-3 2ನೇ ಗುಣಮಟ್ಟ

 

*ಉಕ್ಕಿನ ರಚನೆಯ ಪೇಂಟಿಂಗ್ ಕೌನ್ಸಿಲ್ ಸೂಚನೆ
ಸವಕಳಿ ಅಭಿಯಂತರರ ರಾಷ್ಟ್ರೀಯ ಸಂಘದ ಸೂಚನೆ
ಸ್ವೀಡಿಷ್ ನಿಯಮಗಳು
ಬ್ರಿಟಿಷ್ ಗುಣಮಟ್ಟ ಸೂಚನೆ

ಅಲ್ಯುಮಿನಿಯಂ/ತಗಡು/ತಾಮ್ರ/ಹಿತ್ತಾಳೆ ಮತ್ತು ಇತರ ನಾನ್-ಫೆರಸ್ ಲೋಹಗಳು

 • ಮೇಲ್ಮೈ ಒಣ ಮತ್ತು ಸ್ವಚ್ಛವಾಗಿರಬೇಕು.
 • ಯಾವುದೇ ಎಣ್ಣೆ/ಗ್ರೀಸ್ ಅಂಶವನ್ನು ತೆಗೆಯಬೇಕು.
 • ಕಡಿಮೆ ಒತ್ತಡ ಮತ್ತು ನಾನ್-ಮಟಲಿಕ್ ಅಬ್ರೇಸಿವ್ ಗಳನ್ನು ಉಪಯೋಗಿಸಿ ಸ್ವಚ್ಛವಾದ ಮೇಲ್ಮೈಅನ್ನು ಅಬ್ರೇಡ್ ಮಾಡಬೇಕು ಅಥವಾ ಸ್ವೀಪ್-ಬ್ಲಾಸ್ಟ್ ಮಾಡಬೇಕು. ಅನಂತರ ವಾಶ್ ಪ್ರೈಮರ್ ಕೋಟ್ ನಿಂದ ಪ್ರೈಮ್ ಮಾಡಬೇಕು.  


ಗ್ಯಾಲ್ವನೈಸ್ ಮಾಡಿದ ಸ್ಟೀಲ್

 • ಯಾವುದೇ ಎಣ್ಣೆ/ಗ್ರೀಸ್ ತೆಗೆಯಲು ಡೀಗ್ರೀಸ್ ಮಾಡುವುದು.
 • ಅಧಿಕ ಒತ್ತಡ, ತಾಜಾ ನೀರಿನಿಂದ ತೊಳೆಯುವ ಮೂಲಕ ಯಾವುದೇ ಬಿಳಿ ಸತುವಿನ ಸವಕಳಿಯ ಉತ್ಪಾದನೆಗಳನ್ನು ತೆಗೆಯಬೇಕು.
 • ಕರಗಬಹುದಾದ ಸತುವಿನ ಉಪ್ಪುಗಳನ್ನು ತೆಗೆಯಲು ನೀರಿನಿಂದ ತೊಳೆಯುವುದು ಉತ್ತಮ.


ಸ್ಟೈನ್ ಲೆಸ್ ಸ್ಟೀಲ್

 • ಸ್ಟೈನ್ ಲೆಸ್ ಸ್ಟೀಲ್ ಮೇಲ್ಮೈಗಳ ಮೇಲೆ ಕೋಟಿಂಗ್ ಮಾಡುವ ಮುಂಚೆ ಯಾವುದೇ ವಿಶೇಷ ಮೇಲ್ಮೈ ಸಂಸ್ಕರಣೆ ಬೇಕಾಗಿರುವುದಿಲ್ಲ. ಈ ಮೇಲ್ಮೈಗಳ ಮೇಲೆ ಎಣ್ಣೆ, ಗ್ರೀಸ್, ಹೊಲಸು ಮತ್ತು ಇತರ ಪದಾರ್ಥಗಳು ಇರಬಾರದು.
 • ಉತ್ತಮ ಕೋಟಿಂಗ್ ಅಂಟುವಿಕೆಯನ್ನು ಖಚಿತಪಡಿಸಿಕೊಳ್ಳಲು ಸ್ಟೈನ್ ಲೆಸ್ ಸ್ಟೀಲ್ ಮೇಲೆ ಸರ್ಫೇಸ್ ಪ್ರೊಫೈಲ್ ಅಭಿವೃದ್ಧಿಪಡಿಸಿಕೊಳ್ಳುವುದು ಉತ್ತಮ.
 • ಹೆಚ್ಚಿನ ಕೋಟಿಂಗ್ ಸಿಸ್ಟಮ್ ಗಳಲ್ಲಿ 1.5 ಮತ್ತು 3.0 ಮಿಲ್ಸ್ ನಡುವಿನ ಪ್ರೊಫೈಲ್ ಡೆಪ್ತ್ ಅನ್ನು ಸೂಚಿಸಲಾಗಿದೆ.


ಕಾಂಕ್ರೀಟ್ ಮತ್ತು ಗಾರೆಯ ಮೇಲ್ಮೈಗಳು

ಹೊಸ ಕಾಂಕ್ರೀಟ್ ಮೇಲ್ಮೈ:

 • ಕೋಟಿಂಗ್ ಮಾಡುವ ಮುಂಚೆ ಕನಿಷ್ಠ 30 ದಿನಗಳವರೆಗೆ ಕ್ಯೂರ್ ಆಗಲು ಬಿಡಬೇಕು.
 • ಕಾಂಕ್ರೀಟ್ /ಗಾರೆಯ ತೇವಾಂಶವು 6% ಕ್ಕಿಂತ ಕಡಿಮೆ ಇರಬೇಕು.
 • ದೊಡ್ಡ ಜಾಗಗಳಿದ್ದರೆ ಮತ್ತು ತೀವ್ರ ಒಡ್ಡುವಿಕೆ (ಎಕ್ಸ್ ಪೋಷರ್) ಪರಿಸ್ಥಿತಿಗಳಿದ್ದರೆ, ಲೈಟ್ ಬ್ಲಾಸ್ಟಿಂಗ್ ಮಾಡಿ ಮೇಲ್ಮೈಯನ್ನು ಸಿದ್ಧಪಡಿಸಬೇಕು. ಬ್ಲಾಸ್ಟಿಂಗ್ ಮಾಡುವುದು ಸಾಧ್ಯವಿರದ ಜಾಗಗಳಲ್ಲಿ ಲೇಟನ್ಸ್ ತೆಗೆಯಲು ವಯರ್ ಬ್ರಶಿಂಗ್ ಮಾಡಬೇಕಾಗುತ್ತದೆ. ಅನಂತರ ದ್ರವ ರೂಪದ ಹೈಡ್ರೊಕ್ಲೋರಿಕ್ ಅಸಿಡ್ ನಿಂದ ಸಂಸ್ಕರಿಸಬೇಕಾಗುತ್ತದೆ.
 • ಪ್ರೈಮರ್ ಹಚ್ಚುವ ಮುಂಚೆ ಮೇಲ್ಮೈ ಪೂರ್ತಿ ಒಣಗಲು ಬಿŃ#3233;ಿ.

ಹಳೆಯ ಕಾಂಕ್ರೀಟ್ ಮೇಲ್ಮೈ:

 • ಗ್ರೀಸ್, ಎಣ್ಣೆಯಂತಹ ಮೇಲ್ಮೈ ದೂಷಕಗಳನ್ನು ಸಾಲ್ವಂಟ್ ವೈಪಿಂಗ್ ಅಥವಾ 10% ಕಾಸ್ಟಿಕ್ ಸಲ್ಯೂಷನ್ ಉಪಯೋಗಿಸಿ ತೆಗೆದುಹಾಕಿ.
 • ಮೇಲ್ಮೈಗೆ ಲೈಟ್ ಬ್ಲಾಸ್ಟಿಂಗ್ ಮಾಡುವ ಮೂಲಕ ಅದನ್ನು ಸಿದ್ಧಪಡಿಸಬೇಕು. ಬ್ಲಾಸ್ಟಿಂಗ್ ಮಾಡುವುದು ಸೂಕ್ತವೆನಿಸದಿದ್ದರೆ, ದ್ರವ ರೂಪದ ಎಚ್ ಸಿ ಐ ಉಪಯೋಗಿಸಿ ಮೇಲ್ಮೈಯನ್ನು ಸಿದ್ಧಪಡಿಸಿ.
 • ನೀರಿನಿಂದ ಅಸಿಡ್ ಮತ್ತು ದೂಷಕಗಳನ್ನು ತೆಗೆದುಹಾಕಿ.
 • ಅಸಿಡ್ ಸಲ್ಯೂಷನ್ ಗಳು ಮೇಲ್ಮೈ ಮೇಲೆ ಮತ್ತು ಸಂಧಿಗಳ ಮೇಲೆ ಉಳಿಯದಂತೆ ಮಾಡಿ.
 • ಪ್ರೈಮರ್ ಹಚ್ಚುವ ಮುಂಚೆ ಮೇಲ್ಮೈ ಚೆನ್ನಾಗಿ ಒಣಗುವಂತೆ ಮಾಡಿ.

ಕಟ್ಟಿಗೆಯ ಮೇಲ್ಮೈಗಳು:

 • ಹೊಲಸು/ಗ್ರೀಸ್/ಎಣ್ಣೆಯನ್ನು ಒಂದು ಅಥವಾ ಹೆಚ್ಚು ರಾಸಾಯನಿಕ ಶುದ್ಧೀಕರಣ ವಿಧಾನಗಳಿಂದ ತೆಗೆದುಹಾಕಬೇಕು.
 • ಗಂಟುಗಳು, ಮೊಳೆಗಳು, ತೂತುಗಳು, ಬಿರುಕುಗಳು ಇತ್ಯಾದಿ ಇವುಗಳನ್ನು ಸೂಕ್ತ ಫಿಲ್ಲರ್ ಕಂಪೌಂಡ್ ಗಳಿಂದ ತುಂಬಬೇಕು, ಯಾವುದೇ ಸಡಿಲ ಅಂಟು ಪದಾರ್ಥವಿದ್ದರೆ ಅದನ್ನು ಕಿತ್ತು ತೆಗೆಯಬೇಕು ಮತ್ತು ಮೇಲ್ಮೈಯನ್ನು ಸ್ಯಾಂಡ್ ಮಾಡಬೇಕು.
 • ಒರಟಾದ ಮೇಲ್ಮೈಗಳನ್ನು ಕೋಟಿಂಗ್ ಮಾಡುವ ಮುಂಚೆ ಸ್ವಚ್ಛವಾಗಿ ತೊಳೆಯಬೇಕು ಮತ್ತು ಸರಿಯಾಗಿ ಒಣಗಿಸಬೇಕು.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ