ಭಾಷೆಗಳು

ಎಕ್ಸ್ ಟೀರಿಯರ್‍ ಸ್ಟೈಲ್ ಗೈಡ್

ನೆರೊಲ್ಯಾಕ್ ಎಕ್ಸ್ ಟೀರಿಯರ್‍ ಕಲರ್‍ ಗೈಡ್ ನಿಮ್ಮ ಮನೆಯ ಹೊರಗೋಡೆಗಳಿಗೆ ತಕ್ಕ ಸ್ಫೂರ್ತಿದಾಯಕ ವಿಶೇಷ ಕಲರ್‍ ಪ್ಯಾಲೆಟ್ ಗಳನ್ನು ಹೊಂದಿರುವ ಪುಸ್ತಕವಾಗಿದೆ. ಒಂದು ಅದ್ಭುತ ಜಾಗದಲ್ಲಿ ಮನೆ ಕಟ್ಟಬೇಕೆಂಬುದು ನಮ್ಮ ಹೆಬ್ಬಯಕೆಯಾಗಿರುತ್ತದೆ. ಅದು ಬೆಟ್ಟದ ಮಡಿಲಲ್ಲಿ ಇರಬೇಕು, ಇಲ್ಲವೇ ಸಮುದ್ರ ದಡದಲ್ಲಿರುವ ಕಡಿದಾದ ಬಂಡೆ ಅಥವಾ ಹೂಗಳು ತುಂಬಿರುವ ಉದ್ಯಾನದ ನಡುವೆ ಇರಬೇಕು. ನಾವು ಇಂಥದೇ ಜಾಗಗಳಿಂದ ಪ್ರೇರಣೆ ಪಡೆದು ನಿಮ್ಮ ಮನೆಯ ಹೊರಗೋಡೆಗಳನ್ನು ಅಲಂಕರಿಸುತ್ತೇವೆ. ನೆರೊಲ್ಯಾಕ್ ಭಾರತವನ್ನೆಲ್ಲ ಸುತ್ತಿ ಅದರ ಭೂಪ್ರದೇಶ ಹೇಗೆ ಬದಲಾಗುತ್ತಿದೆ ಎಂಬುದನ್ನು ಗಮನಿಸಿದೆ. ಈ ಪುಸ್ತಕದಲ್ಲಿ ನಗರದಲ್ಲಿರುವ ಭಾರತೀಯ ಮನೆಗೆ ಬೇಕಾದ ಸ್ಫೂರ್ತಿದಾಯಕ ಬಣ್ಣಗಳನ್ನು ನೀಡಲಾಗಿದೆ. ನಾವು ಮನೆಗೆ ಮೊದಲ ಬಾರಿಗೆ ಅಥವಾ ಮತ್ತೊಮ್ಮೆ ಬಣ್ಣ ಹಚ್ಚುವಾಗ, ಸೂಕ್ತ ಪ್ರೇರಣೆಗಾಗಿ ಹುಡುಕುತ್ತಿರುತ್ತೇವೆ. ಮನೆ ಮತ್ತು ಅದರ ಸುತ್ತಮುತ್ತಲಿನ ವಾಸ್ತುಶಿಲ್ಪವನ್ನು ಅರಿತುಕೊಳ್ಳಿ. ಏಳು ವಿಶಿಷ್ಟ ಬಣ್ಣಗಳಿಂದ ಸರಿಯಾದ ಕಲರ್‍ ಪ್ಯಾಲೆಟ್ ಆಯ್ದುಕೊಳ್ಳಿ.

ಅತ್ಯದ್ಭುತ ಬಿಳಿಬಣ್ಣಗಳು

ಹೊಸ ಕಲಾತ್ಮಕತ ನೋಟ ಹೊಂದಿರುವ ಮನೆಗೆ ಬಿಳಿ ಬಣ್ಣದ ವಿವಿಧ ಟಿಂಟ್ ಗಳು ಇನ್ನಷ್ಟು ಪರಿಪೂರ್ಣತೆ ನೀಡುತ್ತವೆ. ಒಂದು ಮನೆಗೆ ಜೀವ ತುಂಬುವಂತಹ ಕಲೆ ಇದ್ದಂತೆ ಅದು.

ಇನ್ನಷ್ಟು ತಿಳಿಯಿರಿ

ನಗರಪ್ರಜ್ಞೆ

ಹೆಚ್ಚಿನ ಮನೆಗಳನ್ನು ನಗರ ಜೀವನಕ್ಕೆ ಸರಿಹೊಂದುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ತೆಳು ಕೆನೆ ಬಣ್ಣಗಳು ಮತ್ತು ಕೆಂಪು ಗುಲಾಬಿ ಬಣ್ಣಗಳ ಸಂಗಮದಿಂದಾಗಿ ಈ ಮನೆಗಳಲ್ಲಿ ನಗರಕ್ಕೆ ತಕ್ಕ ಕಳೆ ತುಂಬುತ್ತದೆ.

ಇನ್ನಷ್ಟು ತಿಳಿಯಿರಿ

ಬೆಳಕಿನಚೆಲ್ಲಾಟ

ನಿಜಕ್ಕೂ ಅನುಕೂಲಕರವಾದ ಮನೆಗಳಲ್ಲಿ ಸನ್ ಲಿಟ್ ಬ್ಲಿಸ್ ಅಥವಾ ಸೂರ್ಯನ ಬೆಳಕು ಸಾಕಷ್ಟು ಇರಬೇಕೆಂದು ನಾವು ಬಯಸುತ್ತೇವೆ. ಚಿರಪರಿಚಿತ ಮರಗಳು, ಎಥ್ನಿಕ್ ಫ್ಯಾಬ್ರಿಕ್ಸ್ ಮತ್ತು ಹಳದಿ, ನಸು ಹಳದಿ ಕಂದು ಬಣ್ಣ, ಕಿತ್ತಳೆ ಮತ್ತು ಆಲಿವ್ ನಂತಹ ಮನಸ್ಸಿಗೆ ಸಮಾಧಾನ ನೀಡುವ ಬಣ್ಣಗಳು ನಿಮ್ಮಿಷ್ಟದ ಮನೆಯನ್ನು ಸೃಷ್ಟಿಸುತ್ತವೆ.

ಇನ್ನಷ್ಟು ತಿಳಿಯಿರಿ

ಸ್ವರ್ಗಕ್ಕೆಪ್ರಯಾಣ

ನೀವು ಮನರಂಜನೆ ನೀಡುವವರಾಗಿರಬಹುದು, ಲೌಂಜರ್‍ ಅಥವಾ ಸ್ವತಂತ್ರ ವಿಚಾರದವರಾಗಿರಬಹುದು, ನಿಮ್ಮ ಮನೆಯಲ್ಲಿ ನಿಮ್ಮದೇ ಜಗತ್ತು ಸೃಷ್ಟಿಸಲು ಒಂದು ಜಾಗ ಇರಬೇಕೆಂದು ಬಯಸುತ್ತೀರಿ. ನೀವು ಇಲ್ಲಿ ಹೆಚ್ಚು ಸಮಯ ಕಳೆಯುತ್ತ ಜಗತ್ತನ್ನು ಮರೆಯಲು ಇಷ್ಟಪಡುತ್ತೀರಿ.

ಇನ್ನಷ್ಟು ತಿಳಿಯಿರಿ

ಟ್ರಾಪಿಕಲ್ಪ್ಯಾರಡೈಸ್

ನಿಮ್ಮ ಮನೆಯನ್ನು ವಿಭಿನ್ನವಾದ ಟ್ರಾಪಿಕಲ್ ಪ್ಯಾರಡೈಸ್ ಆಗಿ ಪರಿವರ್ತಿಸಿ. ದೊಡ್ಡ ಗಿಡಗಳು, ಎದ್ದು ಕಾಣುವ ಬಣ್ಣಗಳು ಮತ್ತು ನೈಸರ್ಗಿಕ ನೋಟ ಇವೆಲ್ಲ ಮನೆ ಸಮೃದ್ಧವಾಗಿ ಕಾಣುವಂತೆ ಮಾಡುತ್ತವೆ.

ಇನ್ನಷ್ಟು ತಿಳಿಯಿರಿ

ಆಧುನಿಕ ಮೋನೊಕ್ರೋಮ್

ನಿಮ್ಮ ಮನೆ ಕಲರ್‍ಡ್ ನ್ಯೂಟ್ರಲ್ ಗಳ ಮಾಡರ್ನಿಸ್ಟ್ ಪ್ಯಾಲೆಟ್ ನಲ್ಲಿರುವ ಪುಟ್ಟ ಗೂಡು ಇದ್ದಂತೆ. ಎಲ್ಲ ತರಹದ ಬೂದು ಮತ್ತು ಕಂದು ಬಣ್ಣಗಳು ಗೋಡೆಗಳಿಗೆ ಕಣ್ಣು ಕೋರೈಸುವ ನೋಟ ನೀಡುತ್ತವೆ. ಆಗ ಇಡೀ ಕೋಣೆ ವಿಶ್ರಾಂತಿ ಸ್ಥಳವಾಗಿ ರೂಪಾಂತರಗೊಳ್ಳುತ್ತದೆ.

ಇನ್ನಷ್ಟು ತಿಳಿಯಿರಿ

ಗುಪ್ತಉದ್ಯಾನ

ದಿನನಿತ್ಯದ ಸದ್ದು ಗದ್ದಲ ಮತ್ತು ಗಗನಚುಂಬಿ ಕಟ್ಟಡಗಳ ಮಧ್ಯೆ ಜೀವನ ಕಳೆಯುತ್ತಿರುವ ನಿಮಗೆ ನಿಮ್ಮದೇ ಆದ ಗುಪ್ತ ಉದ್ಯಾನ ಇದ್ದಿದ್ದರೆ ಎಂದು ಅನ್ನಿಸುತ್ತದೆ. ನಿಮ್ಮದೇ ಆದ ಗುಪ್ತ ಉದ್ಯಾನ ಇಲ್ಲಿ ಕಂಡುಕೊಳ್ಳಿ.

ಇನ್ನಷ್ಟು ತಿಳಿಯಿರಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ