ಭಾಷೆಗಳು

ನೆರೊಲ್ಯಾಕ್ ನಲ್ಲಿ ಜೀವನ

ಎಚ್ ಆರ್‍ ಕಾರ್ಯತಂತ್ರ ಮತ್ತು ಸಂಘಟನೆಯ ಕಾರ್ಯಕ್ಷಮತೆ

ನಮ್ಮ ಉದ್ಯೋಗಿಗಳು ನಮ್ಮ ಸಂಸ್ಥೆಯ ಜೀವಾಳ. ಆದ್ದರಿಂದ, ನಮ್ಮಲ್ಲಿ ನಂಬಿಕೆ, ವಿಶ್ವಾಸ ಮತ್ತು ಪಾರದರ್ಶಕತೆಯಿಂದ ಕೂಡಿದ ವಾತಾವರಣ ಸೃಷ್ಟಿಸುವುದು ನಮ್ಮ ಪ್ರಯತ್ನವಾಗಿದೆ.

ಕೆಲಸಗಾರರ ಸಂಬಳದಲ್ಲಿ ಹೆಚ್ಚಳ ಮತ್ತು ನೇಮಕಾತಿ ವ್ಯವಸ್ಥೆ ಸೂಕ್ತ ರೀತಿಯಲ್ಲಿ ನಡೆಯುವಂತೆ ಮಾಡಲು ಕನ್ಸೈ ನೆರೊಲ್ಯಾಕ್ ಎಚ್ ಆರ್‍ ವಿಭಾಗವು ಹಲವಾರು ಟೂಲ್ ಗಳನ್ನು, ಪ್ರಕ್ರಿಯೆಗಳನ್ನು ಮತ್ತು ಚಟುವಟಿಕೆಗಳನ್ನು ಪ್ರಾರಂಭಿಸಿದೆ.

ಕೆಲಸದ ವ್ಯವಸ್ಥೆಗಳು

ಆರ್‌ಎಮ್‌ಎಸ್: ರಿಕ್ರುಟ್ಮೆಂಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಅನ್ನು ಕೆ ಎನ್ ಪಿ ಎಲ್ ನಲ್ಲಿ ಕೆಲಸಗಾರರಿಗೆ ನೀಡುವ ಸೇವೆಗಳಲ್ಲಿ ಸುಧಾರಣೆ ತರುವ ಮತ್ತು ಅಡಚಣೆ ಇಲ್ಲದೇ ಸೇವೆ ನೀಡುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಆ ಮೂಲಕ ಉದ್ಯೋಗಿಯ ಸ್ವಯಂ ಸೇವಾ ಪೋರ್ಟಲ್ ನಲ್ಲಿ ಆನ್ ಲೈನ್ ಮಾನವ ಶಕ್ತಿ ಅಗತ್ಯಗಳು, ಉದ್ಯೋಗಾವಕಾಶ ಹಂಚಿಕೊಳ್ಳುವಿಕೆ, ಉದ್ಯೋಗಾವಕಾಶದ ಸ್ಥಿತಿ ತಿಳಿಯುವುದು ಮತ್ತು ಹೊಸ ನೇಮಕಾತಿಗಳಿಗಾಗಿ ನೇಮಕಾತಿ ಪತ್ರಗಳನ್ನು ಕೊಡುವುದು ಇದೆಲ್ಲ ಸಾಧ್ಯವಾಗುವಂತೆ ಮಾಡಲಾಗಿದೆ.


ಪಿಎಮ್‌ಎಸ್:
ಆನ್ ಲೈನ್ ಪರ್ಫಾರ್ಮನ್ಸ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಪಿಎಮ್‌ಎಸ್) ಒಂದು ವೆಬ್ ಆಧರಿತ ಟೂಲ್ ಆಗಿದ್ದು ಅಪ್ರೇಸಲ್ ಸ್ವೀಕರಿಸುವವರಿಗೆ ಮತ್ತು ಅಪ್ರೇಸಲ್ ನೀಡುವವರಿಗೆ ತ್ರೈಮಾಸಿಕ ಮತ್ತು ವಾರ್ಷಿಕ ಕ್ರಮವಿಧಾನದ ಬಗ್ಗೆ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ. ಒಬ್ಬ ಕೆಲಸಗಾರನ ಕಾರ್ಯಕ್ಷಮತೆಯನ್ನು ಹೇಗೆ ಅಳೆಯಲಾಗುತ್ತದೆ ಮತ್ತು ಮೇಲ್ವಿಚಾರಿಸಲಾಗುತ್ತದೆ ಎಂಬುದನ್ನು ಉದ್ಯೋಗಿಗಳಿಗೆ ತಿಳಿಸುವಲ್ಲಿ ಆನ್ ಲೈನ್ ಪಿಎಮ್‌ಎಸ್ ಸಾಕಷ್ಟು ಸಹಕಾರಿಯಾಗಿದೆ. ಉದ್ಯೋಗಿಗಳು ತಮ್ಮ ಬಲ, ದೌರ್ಬಲ್ಯ ಮತ್ತು ಪ್ರಗತಿಗೆ ಸಂಬಂಧಿಸಿದಂತೆ ನೀಡಲಾಗುವ ರೇಟಿಂಗ್ ಗಳನ್ನು ಮತ್ತು ಪರೀಕ್ಷಿಸುವ ವಿಧಾನದ ಬಗ್ಗೆ ಅರಿತುಕೊಳ್ಳಬಹುದು. ಈ ಮೂಲಕ ಅವರು ತಮಗೆ ಅಗತ್ಯವಿರುವ ತರಬೇತಿಗಳ ಬಗ್ಗೆ ಮತ್ತು ಅಭಿವೃದ್ಧಿ ಬಗ್ಗೆ ಚರ್ಚಿಸಿ ತಿಳಿದುಕೊಳ್ಳಬಹುದು .


ಪರ್ಫಾರ್ಮನ್ಸ್ ಡೈರಿ: ಇದು ಒಬ್ಬ ಉದ್ಯೋಗಿಯ ಕೆಲಸಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಕುರಿತು ಮಾಹಿತಿ ನಮೂದಿಸಲು ಇರುವ ಟೂಲ್ ಆಗಿದೆ. ಈ ಮಾಹಿತಿಯು ನಿತ್ಯದ ಚಟುವಟಿಕೆಗಳು ಅಥವಾ ಸಾಧನೆಗಳು ಮತ್ತು ಉದ್ಯೋಗಿಯ ಪ್ರಸ್ತುತ ವರ್ಷದ ಕೆಆರ್‌ಎ ಗೆ ಸಂಬಂಧಿಸಿದ ಚಟುವಟಿಕೆಗಳಾಗಿರಬಹುದು.

ಬೋಲ್ಟ್: ಇದೊಂದು ಅತಿ ಮುಖ್ಯವಾದ, ಆನ್ ಲೈನ್ ಟೆಸ್ಟಿಂಗ್ ಉಪಕ್ರಮವಾಗಿದ್ದು, ಆನ್ ಲೈನ್ ಟೆಸ್ಟಿಂಗ್ ಜೊತೆಗೆ ಇನ್ನೂ ಹಲವಾರು ಕೆಲಸ ಮಾಡುವುದರಿಂದ ಇದನ್ನು ಸೂಕ್ತವಾಗಿ ಬಿ ಓ ಎಲ್ ಟಿ ಅಂದರೆ ಬಿಯಾಂಡ್ ಆನ್ ಲಯನ್ ಟೆಸ್ಟಿಂಗ್ ಎಂದು ಕರೆಯುತ್ತಾರೆ. ಬೋಲ್ಟ್ ನ ಗುರಿ ಸಂಘಟನೆಯಲ್ಲಿರುವ ಎಲ್ಲ ಉದ್ಯೋಗಿಗಳ ಸಾಮರ್ಥ್ಯ ಮಟ್ಟವನ್ನು ಹೆಚ್ಚಿಸುವುದು ಮತ್ತು ಅವರ ವೃತ್ತಿಯಲ್ಲಿ ಬೇಕಾದ ಅಭಿವೃದ್ಧಿ, ಅಪ್ರೇಸಲ್ ಮತ್ತು ಕ್ರಾಸ್ ಫಂಕ್ಷನಲ್ ಬೆಳವಣಿಗೆಗಳನ್ನು ಒದಗಿಸುವುದಾಗಿದೆ.

ಕೆಲಸದ ಜಾಗದಲ್ಲಿ ಅನುಸರಿಸುವ ಅಭ್ಯಾಸಗಳು

ಕ್ಯಾಂಪಸ್ ಸಹಯೋಗ: ಗೌರವಾನ್ವಿತ ಮ್ಯಾನೇಜ್ ಮೆಂಟ್ ಮತ್ತು ಇಂಜಿನಿಯರಿಂಗ್/ತಾಂತ್ರಿಕ ಸಂಸ್ಥೆಗಳಿಂದ ಉದಯೋನ್ಮುಖ ಪ್ರತಿಭೆಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿಯ ಕೆಲಸ ನಡೆಯುವುದು ಅಲ್ಪಾವಧಿಯ ಇಂಟರ್ನ್‌ಷಿಪ್ ಮತ್ತು ಸೆಮಿನಾರ್‍ ಹಾಗೂ ಕ್ಯಾಂಪಸ್ ಸಹಯೋಗಗಳಂತಹ ಉಪಕ್ರಮಗಳ ಮೂಲಕ. ನೆರೊಲ್ಯಾಕ್ ನಲ್ಲಿ ನಾವು ವಿದ್ಯಾರ್ಥಿಗಳ ಸಾಮರ್ಥ್ಯ ವರ್ಧಿಸುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುವ ಕಾರ್ಯ ಮಾಡುತ್ತೇವೆ.