ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ಪ್ರಕ್ರಿಯೆ

ಪೌಡರ್ ಕೋಟಿಂಗ್ ಪ್ರಕ್ರಿಯೆಗಳು ಕೋಟಿಂಗ್ ಮಾಡಬೇಕಾದ ವಸ್ತುವಿಗೆ ತಕ್ಕಂತೆ ಬದಲಾಗಬಹುದು. ಆದಾಗ್ಯೂ, ಪ್ರಕ್ರಿಯೆಗಳನ್ನು ನಾಲ್ಕು ಕಾರ್ಯಗಳಲ್ಲಿ ವಿಂಗಡಿಸಬಹುದು:

ಮೇಲ್ಮೈ ಸರಿಯಾಗಿ ಸ್ವಚ್ಛಗೊಳಿಸಲಾಗಿದೆ ಮತ್ತು ಉತ್ಪಾದನಾ ಎಣ್ಣೆಗಳಂತಹ “ಮರಳು”ಗಳಿಂದ ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ಮೇಲ್ಮೈ ಸಿದ್ಧತೆ ಶುರುವಾಗುತ್ತದೆ. ಅನಂತರದ ಮೇಲ್ಮೈ ಸಂಸ್ಕರಣೆಗಳು ಬ್ಲಾಸ್ಟಿಂಗ್ ಒಳಗೊಂಡಿರಬಹುದು. ಜೊತೆಗೆ ಕಬ್ಬಿಣದ ರಂಜಕ ಅಥವಾ ಸತುವಿನ ರಂಜಕದಿಂದಲೂ ಮೇಲ್ಮೈ ಸ್ವಚ್ಛಗೊಳಿಸಬಹುದು. ದೀರ್ಘಕಾಲದ ಸವಕಳಿಯ ಕ್ಷಮತೆಯನ್ನು ಆಧರಿಸಿ ಥರ್ಮೊಪ್ಲಾಸ್ಟಿಕ್ ಪೌಡರ್ ಗಳು ಸಾಮಾನ್ಯವಾಗಿ ಪ್ರೈಮರ್ ಬಳಸಿಕೊಂಡು ಅಂಟುತನವನ್ನು ಹೆಚ್ಚಿಸುತ್ತವೆ. ಥರ್ಮೊಸೆಟ್ ಪೌಡರ್ ಗಳೊಳಗೆ ಅಂಟುತನ ಮೊದಲೇ ಇರುವುದರಿಂದ ಅವುಗಳಿಗೆ ಪ್ರೈಮರ್ ಅಗತ್ಯವಿರುವುದಿಲ್ಲ. ಆದಾಗ್ಯೂ, ಪ್ರೈಮರ್ ಗಳನ್ನು ಕೆಲವು ಅಂಶಗಳ ವರ್ಧನೆಗಾಗಿ ಥರ್ಮೊಸೆಟ್ ಗಳ ಜೊತೆಗೆ ಉಪಯೋಗಿಸಬಹುದು. ಉಪಯೋಗಿಸಲಾದ ಪ್ರೈಮಿಂಗ್ ವಸ್ತುವು ಪೌಡರ್ ಕೋಟಿಂಗ್ ಗಳಿಗಾಗಿ ಅಗತ್ಯವಿರುವ ಕ್ಯೂರಿಂಗ್ ತಾಪಮಾನಗಳಿಗೆ ಹೊಂದಿಕೊಂಡಿರಬೇಕು

ಪೌಡರ್ ಹಚ್ಚುವುದು ವಿವಿಧ ಬದಲಾವಣೆಗಳುಳ್ಳ ಎರಡು ಮೂಲಭೂತ ತಂತ್ರಗಳ ಕೆಲಸವಾಗಿದೆ. ಈ ತಂತ್ರಗಳು ದ್ರವೀಕರಿಸಿದ ಬೆಡ್ ಮತ್ತು ಎಲೆಕ್ಟ್ರೊಸ್ಟ್ಯಾಟಿಕ್ ಸ್ಪ್ರೇ ಆಗಿವೆ. ದ್ರವೀಕರಿಸಿದ ಬೆಡ್ ಮೂಲ ಪೌಡರ್ ಕೋಟಿಂಗ್ ತಂತ್ರವಾಗಿದೆ. ಅದು ಈಗಲೂ ಥರ್ಮೊಪ್ಲಾಸ್ಟಿಕ್ ಪೌಡರ್ ಗಳನ್ನು ಹಚ್ಚಲು ಉಪಯೋಗಿಸುವ ಪ್ರಾಥಮಿಕ ತಂತ್ರವಾಗಿದೆ. ದ್ರವೀಕರಿಸಿದ ಬೆಡ್ ಅನ್ನು ಕೆಲವು ಥರ್ಮೊಸೆಟ್ ಪೌಡರ್ ಗಳನ್ನು ಹಚ್ಚಲು ಉಪಯೋಗಿಸಲಾಗುತ್ತದೆ. ಏಕೆಂದರೆ ಇಲ್ಲಿ ಅಧಿಕ ಪದರಿನ ನಿರ್ಮಾಣದ ಅಗತ್ಯವಿರುತ್ತದೆ ಅಥವಾ ಬಿಡಿಭಾಗಗಳು ತುಂಬಾ ಚಿಕ್ಕದಾಗಿರುತ್ತವೆ. ಎಲೆಕ್ಟ್ರಿಕಲ್ ಇನ್ಸುಲೇಶನ್ ಗಾಗಿ ವಿನ್ಯಾಸಗೊಳಿಸಲಾದ ಥರ್ಮೊಸೆಟ್ ಪೌಡರ್ ಗಳು ದ್ರವೀಕರಿಸಿದ ಬೆಡ್ ತಂತ್ರವನ್ನು ಉಪಯೋಗಿಸುತ್ತವೆ. ಇಲ್ಲಿ ಭಾಗಗಳನ್ನು ಪೌಡರ್ ಕರಗುವ ಬಿಂದುವಿನ ತಾಪಮಾನದವರೆಗೆ ಮೊದಲೇ ಬಿಸಿ ಮಾಡಲಾಗಿರುತ್ತದೆ. ಅನಂತರ ಭಾಗಗಳನ್ನು ಕೋಟಿಂಗ್ ಪೌಡರಿನ “ದ್ರವೀಕರಿಸಿದ ಬೆಡ್” ನಲ್ಲಿ ಮುಳುಗಿಸಲಾಗುತ್ತದೆ. ಇಲ್ಲಿ ಪ್ಲಾಸ್ಟಿಕ್ ಪೌಡರ್ ಅನ್ನು ಒಂದು ಭಾಗದ ಮೇಲೆ ಕರಗಿಸಲಾಗುತ್ತದೆ.

ಎಲೆಕ್ಟ್ರೊಸ್ಟ್ಯಾಟಿಕ್ ಸ್ಪ್ರೇ ಥರ್ಮೊಸೆಟ್ ಪೌಡರ್ ಗಳಿಗಾಗಿ ಉಪಯೋಗಿಸಲಾಗುವ ಪ್ರಾಥಮಿಕ ತಂತ್ರವಾಗಿದೆ. ಪೌಡರ್ ನ ಕಣಗಳಿಗೆ ಪೌಡರ್ ಕೋಟಿಂಗ್ ಗನ್ ಒಳಗೆ ಎಲೆಕ್ಟ್ರಿಕಲ್ ಚಾರ್ಜ್ ನೀಡಲಾಗುತ್ತದೆ. ಮುಖ್ಯ ಭಾಗವನ್ನು ನೆಲದ ಮೇಲಿರುವ ಫಿಕ್ಸ್ಚರ್ ಗೆ ಜೋಡಿಸಲಾಗುತ್ತದೆ. ವಿದ್ಯುತ್ ನಿಂದ ಚಾರ್ಜ್ ಮಾಡಲಾದ ಪೌಡರ್ ಪಾರ್ಟಿಕಲ್ ಗಳು ನೆಲದ ಮೇಲಿನ ಭಾಗಕ್ಕೆ ಆಕರ್ಷಿತಗೊಳ್ಳುತ್ತವೆ ಮತ್ತು ಅದಕ್ಕೆ ಚಿಕ್ಕ ಚಿಕ್ಕ ಆಯಸ್ಕಾಂತಗಳಂತೆ ಅಂಟಿಕೊಳ್ಳುತ್ತವೆ. ಕಣಗಳನ್ನು ಚಾರ್ಜ್ಗೊಂಡ ಕಣಗಳು ತಡೆಗಟ್ಟುತ್ತವೆ ಮತ್ತು ಕೋಟಿಂಗ್ ಪ್ರಕ್ರಿಯೆ ನಿಂತುಕೊಳ್ಳುತ್ತದೆ. ಈಗ ಸಮಾನವಾದ ಪದರಿನ ದಪ್ಪಳತೆ ದೊರೆಯುತ್ತದೆ.

ನೈಸರ್ಗಿಕ ಅನಿಲದಿಂದ ಕಾರ್ಯ ಮಾಡುವ ಅವನ್ ಗಳನ್ನು ಉಪಯೋಗಿಸಿ ಮೇಲ್ಮೈಯನ್ನು ಬಿಸಿ ಮಾಡಲಾಗುತ್ತದೆ. ದ್ರವೀಕರಿಸಿದ ಬೆಡ್ ತಂತ್ರಜ್ಞಾನದಿಂದ ಥರ್ಮೊಪ್ಲಾಸ್ಟಿಕ್ ಪೌಡರ್ ಅನ್ನು ಹಚ್ಚುವ ಮುಂಚೆ ಮೇಲ್ಮೈಯನ್ನು ಬಿಸಿ ಮಾಡಬೇಕಾಗುತ್ತದೆ. ಥರ್ಮೊಸೆಟ್ ಪೌಡರ್ ಗಳು ಸಾಮಾನ್ಯವಾಗಿ ಎಲೆಕ್ಟ್ರೊಪ್ಲಾಸ್ಟಿಕ್ ಸ್ಪ್ರೇ ತಂತ್ರಜ್ಞಾನದ ಮೂಲಕ ಹಚ್ಚಲಾಗುತ್ತವೆ ಮತ್ತು ಹಚ್ಚಲಾಗುತ್ತಿರುವ ಭಾಗವು ಸಾಮಾನ್ಯ ತಾಪಮಾನದಲ್ಲಿರುತ್ತದೆ. ಆ ಭಾಗದ ಮೇಲ್ಮೈ ಮತ್ತು ಪೌಡರ್ ಅನ್ನು ಒಟ್ಟಿಗೆ ಬಿಸಿ ಮಾಡಲಾಗುತ್ತದೆ.

ಥರ್ಮೊಸೆಟ್ ಪೌಡರ್ ಗಳನ್ನು ಹಚ್ಚಿದಾಗ ಕೋಟಿಂಗ್ ನ ಕ್ಯೂರಿಂಗ್ ಮಾಡಬೇಕಾಗುತ್ತದೆ. (ಸಾಮಾನ್ಯವಾಗಿ ಥರ್ಮೊಪ್ಲಾಸ್ಟಿಕ್ ಪೌಡರ್ ಗಳನ್ನು ಕ್ಯೂರ್ ಮಾಡಿರುವುದಿಲ್ಲ.) ಆ ಭಾಗದ ಮೇಲ್ಮೈಯನ್ನು ಬೇಕಾದ ತಾಪಮಾನದಲ್ಲಿ ಬಿಸಿ ಮಾಡಿದಾಗ (180º-200º ಸೆ), ಅದೇ ತಾಪಮಾನದಲ್ಲಿ ನಿರ್ದಿಷ್ಟ ಸಮಯದವರೆಗೆ ಇರಿಸಲಾಗುತ್ತದೆ, ಸಾಮಾನ್ಯವಾಗಿ 10-15 ನಿಮಿಷಗವಳವರೆಗೆ. ಈ ಮಧ್ಯೆ ಕ್ಯೂರಿಂಗ್ ಏಜೆಂಟ್ ಬೇಕಾದ ಪದರಿನ ಅಂಶಗಳನ್ನು ಬೆಳೆಸುತ್ತದೆ.

ವಸ್ತುವನ್ನು ಚೆನ್ನಾಗಿ ಅರ್ತಿಂಗ್ ಮಾಡುವುದು

ಸಾಂಪ್ರದಾಯಿಕ ಎಲೆಕ್ಟ್ರೊಸ್ಟ್ಯಾಟಿಕ್ ಪೌಡರ್ ಹಚ್ಚುವಿಕೆ ದೊಡ್ಡ ಪ್ರಮಾಣದಲ್ಲಿ ನೆಗೆಟಿವ್ ಚಾರ್ಜ್ಗಳನ್ನು ಸ್ಥಳಾಂತರಿಸುತ್ತವೆ. ಈ ರೀತಿಯ ದೊಡ್ಡ ಪ್ರಮಾಣದ ಎಲೆಕ್ಟ್ರಾನ್ ಗಳನ್ನು ಸರಿಯಾಗಿ ಅರ್ತಿಂಗ್ ಮಾಡಲಾಗದಿದ್ದರೆ, ಕೋಟ್ ಮಾಡಲಾದ ಮೇಲ್ಮೈ ಶಕ್ತಿಶಾಲಿ ನೆಗೆಟಿವ್ ಚಾರ್ಜ್ ಅನ್ನು ಬೇಗನೇ ಬೆಳೆಸಿಕೊಂಡು ಸ್ಪ್ರೇ ಗನ್ ಒಳಗಿನ ನೆಗೆಟಿವ್ ಚಾರ್ಜ್ ಮಾಡಲಾದ ಪೌಡರ್ ಅನ್ನು ತಡೆಗಟ್ಟುತ್ತದೆ. ಇದರ ಪರಿಣಾಮವಾಗಿ, ಸರಿಯಾದ ಅರ್ತಿಂಗ್ ಇಲ್ಲದೇ ಉತ್ತಮ ಹರಿವು ಮತ್ತು ಫಿನಿಶ್, ಬೇಗನೆ ಮತ್ತು ಸಮರ್ಥವಾಗಿ ಪೌಡರ್ ನ ದಪ್ಪ ಪದರನ್ನು ನಿರ್ಮಿಸುವುದು ಸಾಧ್ಯವಾಗುವುದಿಲ್ಲ.

 

ಸ್ಪ್ರೇಯಿಂಗ್ ಉಪಕರಣದ ಉತ್ತಮ ಅರ್ತಿಂಗ್

ಘಟಕದ ಸುರಕ್ಷತೆಗಾಗಿ ಸ್ಪ್ರೇ ಉಪಕರಣ, ಸ್ಪ್ರೇ ಬೂತ್ ಗಳು ಮತ್ತು ಸಂಬಂಧಿತ ಉಪಕರಣವನ್ನು ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಅರ್ತ್ ಮಾಡುವುದು ಅಗತ್ಯವಾಗಿರುತ್ತದೆ. ಈ ಮೂಲಕ ಅಧಿಕ ವೋಲ್ಟೇಜ್ ಹೊರಸೂಸುವುದು ತಪ್ಪುತ್ತದೆ ಮತ್ತು ಅದರಿಂದ ಉಂಟಾಗಬಹುದಾದ ವಿದ್ಯುತ್ ಕಿಡಿಗಳು ಕೂಡ ತಪ್ಪುತ್ತದೆ.

 

ಗಾಳಿಯ ಗುಣಮಟ್ಟ

ಕಾರ್ಯಸ್ಥಳದ ಆರ್ದ್ರತೆ ಹೇಗಿದೆ ಎಂಬುದರ ಮೇಲೆ ಸ್ಪ್ರೇಯಿಂಗ್ ಗುಣಮಟ್ಟ ಅವಲಂಬಿಸಿರುತ್ತದೆ. ಸೂಕ್ತ ಆರ್ದ್ರತೆ 45-50% ಇರಬೇಕು. ಕೇವಲ ಶುದ್ಧ, ಡ್ರೈ ಕಂಪ್ರೆಸ್ ಮಾಡಿದ ಗಾಳಿಯನ್ನು ಪೌಡರ್ ಕೋಟಿಂಗ್ ಉಪಕರಣಕ್ಕೆ ಪೂರೈಸಬೇಕು.

 

ಸ್ಪ್ರೇಯಿಂಗ್ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಇತರ ಅಂಶಗಳು

ಸ್ಪ್ರೇಯಿಂಗ್ ಸಾಮರ್ಥ್ಯ ಎಂದರೆ ಮೊದಲ ಬಾರಿಗೆ ಪೌಡರ್ ಹಚ್ಚುವಾಗ ವಸ್ತುವಿಗೆ ಅಂಟಿಕೊಳ್ಳುವ ಪೌಡರ್ ಪ್ರಮಾಣ. ಗರಿಷ್ಠ ಸ್ಪ್ರೇಯಿಂಗ್ ಸಾಮರ್ಥ್ಯವು ಹಲವಾರು ತಾಂತ್ರಿಕ ಮತ್ತು ಆರ್ಥಿಕ ಅನುಕೂಲಗಳನ್ನು ಹೊಂದಿದೆ.

ಈ ಕೆಳಗಿನ ಅಂಶಗಳು ಸ್ಪ್ರೇಯಿಂಗ್ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವ ಅತಿ ಮುಖ್ಯ ಅಂಶಗಳನ್ನು ಪ್ರತಿನಿಧಿಸುತ್ತವೆ.

  • ಸ್ಪ್ರೇ ಗನ್ ಸ್ಥಿತಿ
  • ಹ್ಯಾಂಗಿಂಗ್ ತಂತ್ರ
  • ಪೌಡರ್ ಪುನರ್ ಬಳಕೆ
  • ವರ್ಜಿನ್ ಪೌಡರ್ ಸೇರಿಸುವುದು

Write To US - Dev

ನಮಗೆ ಬರೆಯಿರಿ

 
1 Start 2 Complete