ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ಪೌಡರ್ ಕೋಟಿಂಗ್ ಏಕೆ ಮಾಡಬೇಕು?

ಪೌಡರ್ ಕೋಟಿಂಗ್ ಗಳು ರೆಸಿನ್ ಗಳು, ಕ್ಯೂರಿಂಗ್ ಏಜೆಂಟ್ ಗಳು ಮತ್ತು ಪಿಗ್ಮೆಂಟ್ ಗಳ ಮಿಶ್ರಣವಾಗಿದ್ದು, ಚೆನ್ನಾಗಿ ವಿಂಗಡಿಸಲಾದ ಕಣಗಳಲ್ಲಿ ಕರಗಿಸಿ ಬೆರೆಸಲಾಗುತ್ತದೆ (ಎಕ್ಸ್ ಟ್ರೂಡೆಡ್) ಮತ್ತು ಪಲ್ವರೈಸ್ ಮಾಡಲಾಗಿರುತ್ತದೆ. ಅವು ಸಾಲ್ವಂಟ್ ಒಳಗೊಂಡಿರುವುದಿಲ್ಲ.

ಎಲೆಕ್ಟ್ರೊಸ್ಟ್ಯಾಟಿಕ್ ಸ್ಪ್ರೇ ಮೂಲಕ ಲೋಹದ ಉತ್ಪಾದನೆಗಳಿಗೆ ಹಚ್ಚಲಾಗುವ, ಕೋಟಿಂಗ್ ಮಾಡಿದ ವಸ್ತುವನ್ನು ಅನಂತರ ಬಿಸಿ ಮಾಡಲಾಗುತ್ತದೆ ಮತ್ತು ಪೌಡರ್ ಅನ್ನು ನುಣುಪಾದ, ನಿರಂತರ ಮತ್ತು ಮಡಚುತ್ತ ಹೋಗುವ ಪದರಾಗಿ ಕರಗುತ್ತ ಹೋಗುತ್ತದೆ. ಥರ್ಮೊಸೆಟಿಂಗ್ ರೆಸಿನ್ ಗಳನ್ನು ಉಪಯೋಗಿಸಿದಾಗ, ಕ್ಯೂರ್ ಮಾಡುವಾಗ ಕೋಟಿಂಗ್ ರಾಸಾಯನಿಕವಾಗಿ ಬದಲಾಗುತ್ತದೆ (ಕ್ರಾಸ್ ಲಿಂಕಿಂಗ್), ಈ ಮೂಲಕ ಅತ್ಯುತ್ತಮ ಕ್ಷಮತೆಯುಳ್ಳ ಡೆಕೊರೆಟಿವ್/ಕಾರ್ಯನಿರ್ವಹಿಸುವ ಫಿನಿಶ್ ಆಗಿ ಹೊರಹೊಮ್ಮುತ್ತದೆ.

ಪೌಡರ್ ತಂತ್ರಜ್ಞಾನದ ಪ್ರಯೋಜನಗಳಿಂದಾಗಿ ಅದೊಂದು ಮುಖ್ಯ ಕೋಟಿಂಗ್ ಪರ್ಯಾಯವಾಗಿ ಬೆಳೆಯುತ್ತಿದೆ:

ಲಕ್ಷಣಗಳುಪ್ರಯೋಜನಗಳು
ಪ್ರಾಕೃತಿಕ
ವಿಓಸಿ ಎಮಿಶನ್ ಗಳು ಸೊನ್ನೆ ಪ್ರಮಾಣಕ್ಕೆ ಇಳಿಕೆಯಾಗುವುದು.ಒನ್ ಸ್ಟೆಪ್ ಕಂಪ್ಲಯನ್ಸ್, ವರ್ಚುವಲ್ಲಾಗಿ 100% ಸಾಲಿಡ್.
ಸ್ಲಡ್ಜ್ ಅಥವಾ ಸಾಲ್ವಂಟ್ ವಿಲೇವಾರಿ ಇಲ್ಲ.ವಿಲೇವಾರಿ ವೆಚ್ಚದಲ್ಲಿ ಗಮನಾರ್ಹ ಕಡಿತ.
100% ದಷ್ಟು ಮಟೀರಿಯಲ್ ಬಳಕೆ, ಓವರ್‍ ಸ್ಪ್ರೇ ಅನ್ನು ಮರಳಿ ಪಡೆಯಬಹುದು.ಸಾಮಾನ್ಯವಾಗಿ ಹಚ್ಚಲು ಬೇಕಾದ ವಸ್ತುಗಳ ಬೆಲೆ ಕಡಿಮೆ.
ಆರೋಗ್ಯ, ಬೆಂಕಿ ಅನಾಹುತ, ಸುರಕ್ಷತಾ ಅಪಾಯಗಳು ಕಡಿಮೆ.ಸ್ವಚ್ಛಂದವಾದ ಘಟಕ ಕಾರ್ಯಗಳು, ಮತ್ತು ಕಡಿಮೆ ವೆಚ್ಚ.
ಕಾರ್ಯಕ್ಷಮತೆ ಮತ್ತು ಗುಣಮಟ್ಟ
ಗಟ್ಟಿಯಾದ, ಹೆಚ್ಚು ಬಾಳಿಕೆ ಬರುವ ಕೋಟಿಂಗ್.ಹೆಚ್ಚುವರಿ ಪ್ಯಾಕೇಜಿಂಗ್ ಮತ್ತು ನಿರ್ವಹಣೆಯ ಅಗತ್ಯವಿರುವುದಿಲ್ಲ.
ಹೆಚ್ಚು ಗಟ್ಟಿಯಾದ ಪದರು – ಪೌಡರ್‍ ರಾಸಾಯನಿಕ ಪದಾರ್ಥಗಳು ಅಧಿಕ ಕ್ರಾಸ್-ಲಿಂಕ್ ದಟ್ಟಣೆ ಹೆಚ್ಚಾಗಿದ್ದರೆ ಹೀರುವಿಕೆ ಹೆಚ್ಚಾಗುತ್ತದೆ.ಅತ್ಯುತ್ತಮ ಸವಕಳಿ ಮತ್ತು ತೇವಾಂಶ ನಿರೋಧಕತೆ.
ಕಲರ್‍ ಗ್ಲಾಸ್ ಸಮಾನತೆ-ಸುಧಾರಿತ ಉತ್ಪಾದನೆ ಮತ್ತು ಬ್ಯಾಚ್-ಟು-ಬ್ಯಾಚ್ ಸಮಾನತೆ.ಆನ್-ಸೈಟ್ ಮಿಕ್ಸಿಂಗ್ ಅಗತ್ಯವಿಲ್ಲ, ಕೆಲಸಗಾರರ ವೆಚ್ಚ ಕಡಿಮೆ.
ಉತ್ಪಾದಕತೆ
ಹಚ್ಚಲು ಸುಲಭ. ಬೇಗನೇ ಜಮೆಯಾಗುವುದು ಮತ್ತು ಸಿಂಗಲ್ ಪಾಸ್ ಕೋಟಿಂಗ್ ನಿಂದಾಗಿ ತರಬೇತಿ ಪ್ರಕ್ರಿಯೆಗಳು ಸುಲಭವಾಗುತ್ತವೆ.ಹೆಚ್ಚಾದ ಉತ್ಪಾದಕತೆ.
ಅನಾನುಕೂಲತೆಗಳು ಕಡಿಮೆ – ಸೋರಿಕೆ, ಹರಿಯುವಿಕೆ ಅಥವಾ ಜೋಲು ಬೀಳುವಿಕೆ ಆಗುವುದಿಲ್ಲ; ಕ್ಯೂರಿಂಗ್ ಮುಂಚೆ ಸುಲಭವಾಗಿ ಮತ್ತೊಮ್ಮೆ ಸ್ಪ್ರೇ ಮಾಡಲು ಅನುಕೂಲ.ರಿಜೆಕ್ಟ್ ಕಾಸ್ಟ್ ಕಡಿಮೆ, ಹೆಚ್ಚು ಉತ್ಪಾದಕತೆ.
ಸ್ವಚ್ಛಗೊಳಿಸುವುದು ಮತ್ತು ನಿರ್ವಹಣೆ ಜಾಸ್ತಿ ಮಾಡಬೇಕಿಲ್ಲ. ವ್ಯಾಕ್ಯೂಮ್ ಕ್ಲೀನ್ ಮಾಡಬಹುದು.ಕೆಲಸದ, ಸ್ವಚ್ಛಗೊಳಿಸುವ ವೆಚ್ಚ ಕಡಿಮೆ.

ಪೌಡರ್ ಕೋಟಿಂಗ್ ವಸ್ತುಗಳಲ್ಲಿ ಎರಡು ಮೂಲ ವರ್ಗೀಕರಣಗಳಿವೆ. ಅವುಗಳೆಂದರೆ “ಥರ್ಮೊಪ್ಲಾಸ್ಟಿಕ್” ಮತ್ತು “ಥರ್ಮೊಸೆಟ್” ಪೌಡರ್ ಗಳು.

ಥರ್ಮೊಪ್ಲಾಸ್ಟಿಕ್ ಪೌಡರ್ ಗಳು

ಥರ್ಮೊಪ್ಲಾಸ್ಟಿಕ್ ಪೌಡರ್ ಗಳು ಸಾಮಾನ್ಯವಾಗಿ ಪೌಡರ್ ನ ಕರಗುವಿಕೆ ಬಿಂದುವಿಗಿಂತ ಹೆಚ್ಚಿನ ತಾಪಮಾನದಲ್ಲಿ ಪ್ರೀ-ಹೀಟ್ ಮಾಡಲಾದ ಮೇಲ್ಮೈ ಮೇಲೆ ಹಚ್ಚಲಾಗುತ್ತವೆ. ಬಿಸಿ ತಾಕಿದಾಗ ಅದು ಕರಗಿ ಹರಿಯುತ್ತದೆ. ಆದರೆ ತಣ್ಣಗಾಗಿ ಗಟ್ಟಿಯಾದಾಗ ಮುಂಚಿನ ರಾಸಾಯನಿಕ ಸಂಯೋಜನೆಯನ್ನೇ ಹೊಂದಿರುತ್ತದೆ. ನೈಲಾನ್ ಪೌಡರ್ ಕೋಟಿಂಗ್ ವಸ್ತುಗಳು ಅತ್ಯಂತ ಸಾಮಾನ್ಯವಾಗಿ ಉಪಯೋಗಿಸಲಾಗುವ ಥರ್ಮೊಪ್ಲಾಸ್ಟಿಕ್ ಪೌಡರ್ ಗಳಾಗಿವೆ. ಥರ್ಮೊಪ್ಲಾಸ್ಟಿಕ್ ಕೋಟಿಂಗ್ ಗಳು ಅವುಗಳ ನೋಟ ಮತ್ತು ರಾಸಾಯನಿಕ ನಿರೋಧಕತೆಗೆ ಹೆಸರು ವಾಸಿ.

ಥರ್ಮೊಸೆಟ್ ಪೌಡರ್ ಗಳು

ಥರ್ಮೊಸೆಟ್ ಪೌಡರ್ ಗಳು 100% ಸಾಲ್ವಂಟ್ ರಹಿತವಾಗಿವೆ ಮತ್ತು ಸಾಮಾನ್ಯವಾಗಿ ಎಲೆಕ್ಟ್ರೊಸ್ಟ್ಯಾಟಿಕ್ ಸ್ಪ್ರೇ ಉಪಕರಣದ ಮೂಲಕ ಹಚ್ಚಲ್ಪಡುತ್ತವೆ. ಅದರಲ್ಲಿರುವ ಪ್ರತಿಯೊಂದು ಕಣವು ಚಿಕ್ಕ ವಿದ್ಯುತ್ ಚಾರ್ಜ್ ಹೊಂದಿದ್ದು, ಅದು ಅರ್ತ್ ಮಾಡಲಾದ ಸಬ್ ಸ್ಟ್ರೇಟ್ ಗೆ ಅಂಟಿಕೊಂಡಿರುತ್ತದೆ. ಥರ್ಮೊಸೆಟ್ ಪೌಡರ್ ಕೋಟಿಂಗ್ ಸಿಸ್ಟಮ್ ಗಳು ವಿಶಾಲ ಫಾರ್ಮುಲೇಶನ್ ಹೊಂದಿರುತ್ತವೆ. ಅವು ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಹೆಚ್ಚಾಗಿ ಉಪಯೋಗಿಸಲ್ಪಡುತ್ತವೆ.

Write To US - Dev

ನಮಗೆ ಬರೆಯಿರಿ

 
1 Start 2 Complete