
ವಿ ಓ ಸಿ ಎಂದರೇನು?
ಇತ್ತೀಚೆಗಷ್ಟೇ ಪೇಂಟ್ ಮಾಡಲಾದ ಮನೆಯನ್ನು ಅದರ ವಾಸನೆಯಿಂದ ಗುರುತಿಸಬಹುದು. ಆ ಮನೆ ಸುಂದರವಾಗಿ ಕಾಣಿಸಿದರೂ ಅದರ ಒಂದು ಅಡ್ಡ ಪರಿಣಾಮ ವಿಓಸಿ ಆಗಿರುತ್ತದೆ.
ವಿ ಓ ಸಿ ಎಂದರೆ ಕಾರ್ಬನ್ ಯುಕ್ತ ಕಂಪೌಂಡ್ ಆಗಿದ್ದು, ಬಲು ಬೇಗನೇ ಆವಿಯಾಗಿ ಹೋಗುತ್ತದೆ. ಅವು ಗಾಳಿಯಲ್ಲಿ ಬೆರೆತಾಗ, ಇತರ ಅಂಶಗಳ ಜೊತೆಗೆ ಸೇರಿಕೊಂಡು ಓಝೋನ್ ಅನ್ನು ಉತ್ಪಾದಿಸುತ್ತವೆ. ಇದರಿಂದಾಗಿ ವಾಯುಮಾಲಿನ್ಯವಾಗುತ್ತದೆ ಮತ್ತು ಉಸಿರಾಟದ ಸಮಸ್ಯೆಗಳು, ತಲೆನೋವು, ಉರಿ, ಕಣ್ಣಲ್ಲಿ ನೀರು ಬರುವುದು ಮತ್ತು ವಾಕರಿಕೆ ಒಳಗೊಂಡಂತೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಕೆಲವು ವಿ ಓ ಸಿ ಗಳಿಂದಾಗಿ ಕ್ಯಾನ್ಸರ್ ಮತ್ತು ಕಿಡ್ನಿ/ಲಿವರ್ ಗೆ ಹಾನಿ ಕೂಡ ಸಂಭವಿಸುತ್ತದೆಂದು ಹೇಳಲಾಗುತ್ತದೆ.
ಪೇಂಟ್ ಒಣಗಿದಾಗ ಈ ಅಪಾಯಕಾರಿ ವಿ ಓ ಸಿ ಗಳು ದೊಡ್ಡ ಪ್ರಮಾಣದಲ್ಲಿ ಗಾಳಿಯಲ್ಲಿ ಬೆರೆಯುತ್ತವೆ. ಕಟ್ಟಡಗಳ ಹೊರಗಡೆ ಪೇಂಟಿಂಗ್ ಮಾಡುವುದಕ್ಕೆ ಹೋಲಿಸಿದಾಗ, ಒಳಗಡೆ ಪೇಂಟಿಂಗ್ ಮಾಡುವ ವೇಳೆ ವಿ ಓ ಸಿ ಮಟ್ಟ ಸಾಮಾನ್ಯವಾಗಿ 10 ಪಟ್ಟು ಹೆಚ್ಚಾಗಿರುತ್ತದೆ ಹಾಗೂ ಪೇಂಟ್ ಬಳಿದ ತಕ್ಷಣ 1,000 ಪಟ್ಟು ಅಧಿಕವಾಗಿರುತ್ತದೆ. ಪೇಂಟ್ ಬಳಿಯುವಾಗ ಮತ್ತು ಅನಂತರ ವಿ ಓ ಸಿ ಮಟ್ಟ ಹೆಚ್ಚಾಗಿದ್ದರೂ, ಅವು ಹಲವಾರು ವರ್ಷಗಳ ಕಾಲ ಹೊರಸೂಸುತ್ತಲೇ ಇರುತ್ತವೆ. ವಾಸ್ತವದಲ್ಲಿ, ಪೇಂಟ್ ಮಾಡಿದ ಮೊದಲ ವರ್ಷದಲ್ಲಿ ಕೇವಲ 50 ಪ್ರತಿಶತದಷ್ಟು ವಿ ಓ ಸಿ ಗಳು ಬಿಡುಗಡೆಯಾಗಬಹುದು.
ಇದನ್ನೆಲ್ಲ ಕೇಳಿದರೆ ಖಂಡಿತ ಭಯವಾಗುತ್ತದೆ. ಚಿಂತಿಸಬೇಡಿ, ನೆರೊಲ್ಯಾಕ್ ಬಳಿ ಪರಿಹಾರವಿದೆ. 2011 ರಲ್ಲಿ, ನೆರೊಲ್ಯಾಕ್ ತನ್ನ ಕ್ಷೇತ್ರದಲ್ಲಿ ಮೊಟ್ಟಮೊದಲ ಬಾರಿಗೆ ತನ್ನ ಪ್ರೀಮಿಯಂ ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಎಮಲ್ಶನ್ ಗಳನ್ನೆಲ್ಲ ಹೆಚ್ಚು ಕಡಿಮೆ ವಿ ಓ ಸಿ ಮುಕ್ತವಾಗಿಸಿತು. ಜೊತೆಗೆ ತನ್ನ ಜನಪ್ರಿಯ ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಎಮಲ್ಶನ್ ಗಳಲ್ಲಿ ವಿ ಓ ಸಿ ಮಟ್ಟವನ್ನು ಕಡಿಮೆಗೊಳಿಸಿದ ಭಾರತದ ಪ್ರಪ್ರಥಮ ಸಂಸ್ಥೆಯಾಯಿತು. ನೆರೊಲ್ಯಾಕ್ ಪೇಂಟ್ ಗಳಲ್ಲಿ ವಿ ಓ ಸಿ ಗಳ ಮಟ್ಟ ತುಂಬಾ ಕಡಿಮೆ ಇರುವುದರಿಂದ, ಅವು ಉಪಯೋಗಿಸಲು ಸುರಕ್ಷಿತವಾಗಿದ್ದು, ಆರೋಗ್ಯಪೂರ್ಣ ಮನೆಯ ಸಿದ್ಧಾಂತಕ್ಕೆ ಹೇಳಿ ಮಾಡಿಸಿದಂತಿವೆ.