ಸೇವೆ ನೀಡಲಾದ ಉದ್ಯಮಗಳು
ಕೆ ಎನ್ ಪಿ ಎಲ್ ಡ್ರಮ್ ಗಳು ಮತ್ತು ಬ್ಯಾರಲ್ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಈ ಕ್ಷೇತ್ರದ ಎಲ್ಲ ಪ್ರಮುಖ ಉದ್ಯಮಗಳಿಗೆ ಸೇವೆ ಸಲ್ಲಿಸುತ್ತದೆ.
ವಾತಾವರಣದ ರಾಸಾಯನಿಕ ಅಪಘಾತಗಳಿಂದ ಮತ್ತು ಬ್ಯಾರಲ್ ಒಳಗಿನ ಎಣ್ಣೆ, ಪೆಟ್ರೋಲಿಯಂ ಉತ್ಪಾದನೆಗಳು, ಕೈಗಾರಿಕಾ ಸಾಲ್ವಂಟ್ ಗಳು ಮತ್ತು ಸುಗಂಧ ದ್ರವ್ಯಗಳಿಂದ ಬ್ಯಾರಲ್ ಗಳನ್ನು ರಕ್ಷಿಸುವುದಕ್ಕಾಗಿ ಬ್ಯಾರಲ್ ಕೋಟಿಂಗ್ ಗಳನ್ನು ತಯಾರಿಸಲಾಗಿದೆ.
ಗ್ರಾಹಕರ ಬಳಕೆಗೆ ಅನುಗುಣವಾಗಿ ನಾವು ಎಪಾಕ್ಸಿ ಫಿನಿಶ್ ಗಳಿಂದ ಹಿಡಿದು ಪಾಲಿಯುರೆಥೇನ್ ಗಳು ಮತ್ತು ಏರ್/ಸ್ಟವ್ ಡ್ರೈಯಿಂಗ್ ಅಲ್ಕೈಡ್ ಗಳವರೆಗೆ ಹಲವಾರು ಉತ್ಪಾದನೆಗಳನ್ನು ವಿನ್ಯಾಸಗೊಳಿಸಿದ್ದೇವೆ. ನಾವು ಬ್ಯಾರಲ್ ಕೈಗಾರಿಕೆಯಲ್ಲಿ ಸಾಕಷ್ಟು ಬದಲಾವಣೆ ತಂದಿರುವ ಸೂಪರ್ ಸ್ಟವಿಂಗ್ ಬ್ಯಾರಲ್ ಎನಾಮಲ್ ಮತ್ತು ಎಚ್ ಜಿ ಎಚ್ ಎಚ್ – ಹೈ ಗ್ಲಾಸ್ ಹೈ ಹಾರ್ಡ್ ನೆಸ್ ಬ್ಯಾರಲ್ ಎನಾಮಲ್, ನೆರೊಸ್ಟವ್ ರೇಂಜ್ ನಂತಹ ಉತ್ಪಾದನೆಗಳನ್ನು ಕೂಡ ಅಭಿವೃದ್ಧಿಪಡಿಸಿದ್ದೇವೆ.
ಕೆ ಎನ್ ಪಿ ಎಲ್ ಈ ಉದ್ಯಮದಲ್ಲಿ ಮುಂಚೂಣಿಯಲ್ಲಿದ್ದು, ಪ್ರಮುಖ ಸಿಲಿಂಡರ್ ಪೂರೈಕೆದಾರರಿಗೆ ಸೇವೆ ಸಲ್ಲಿಸುತ್ತಿದೆ.
ಸಾಗಿಸುವಾಗ ಮತ್ತು ಪೂರೈಕೆ ಮಾಡುವ ವೇಳೆ ಮೇಲ್ಮೈಗೆ ಕಚ್ಚಾಗುವುದು ಮತ್ತು ಸರಿಯಾಗಿ ನಿರ್ವಹಿಸದಿರುವುದರಿಂದಾಗುವ ಹಾನಿಯಿಂದ ರಕ್ಷಿಸುವುದಕ್ಕಾಗಿ ಗ್ಯಾಸ್ ಸಿಲಿಂಡರ್ ಕೋಟಿಂಗ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಹೆಚ್ಚಿನ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಗಳಿಗೆ ಸಿಗ್ನಲ್ ಕೆಂಪು ಬಣ್ಣ ಹಚ್ಚಲಾಗಿರುತ್ತದೆ. ಅದೇ ಕೈಗಾರಿಕಾ ಸಿಲಿಂಡರ್ ಗಳಿಗೆ ಬೂದು, ನೀಲಿ ಅಥವಾ ಹಸಿರು ಬಣ್ಣ ಹಚ್ಚಲಾಗಿರುತ್ತದೆ.
ಕಸ್ಟಮೈಸ್ ಮಾಡಲಾದ ಉತ್ಪಾದನೆಗಳಲ್ಲಿ, ವಿಶೇಷವಾಗಿ ಈ ಕೈಗಾರಿಕೆಗಾಗಿ ಮಾಡಲಾದ ಉತ್ಪಾದನೆಗಳಲ್ಲಿ ಕೆ ಎನ್ ಪಿ ಎಲ್ ಪ್ರಬಲವಾಗಿ ಉಪಸ್ಥಿತವಾಗಿರುತ್ತದೆ.
ಫ್ಯಾನ್ ಕೋಟಿಂಗ್ ಗಳು ಶುದ್ಧ ಸ್ಟವಿಂಗ್ ಉತ್ಪಾದನೆಗಳು ಮತ್ತು ಅವುಗಳ ಭಾಗಗಳು ಎಐ ಬ್ಲೇಡ್ ಗಳನ್ನು ಹಾಗೂ ರೋಟರ್ (ಬಾಡಿ) ಒಳಗೊಂಡಿದ್ದು, ರೋಟರ್ ಕಾಸ್ಟಿಂಗ್ ನಿಂದ ಮಾಡಲಾಗಿರುತ್ತದೆ. ವಿವಿಧ ಭಾಗಗಳಿಗೆ ವಿವಿಧ ಪ್ರಕಾರದ ಪೇಂಟ್ ಗಳನ್ನು ಹಚ್ಚಲಾಗಿರುತ್ತದೆ ಮತ್ತು ವಿವಿಧ ಹಚ್ಚುವ ವಿಧಾನಗಳನ್ನು ಬಳಸಲಾಗಿರುತ್ತದೆ.
ನಮ್ಮಲ್ಲಿ ಎಪಾಕ್ಸಿ ರೆಸಿನ್ ಪ್ರೈಮರ್ ಗಳ ಜೊತೆಗೆ ಅಲ್ಕಲೈಡ್-ಅಮೈನೊಗಳಿಂದ ಹಿಡಿದು ಅಲ್ಕಲೈಡ್-ಪಾಲಿಯೆಸ್ಟರ್-ಅಮಿನೊಗಳು ಮತ್ತು ಥರ್ಮೊಸೆಟಿಂಗ್ ಅಕ್ರೈಲಿಕ್-ಅಮೈನೊ ರೆಸಿನ್-ಆಧರಿತ ಟಾಪ್ ಕೋಟ್ ಗಳು ದೊರೆಯುತ್ತವೆ. ಟೇಬಲ್ ಫ್ಯಾನ್ ಗಳು, ಪೆಡೆಸ್ಟಲ್ ಫ್ಯಾನ್ ಗಳು ಮತ್ತು ವಾಲ್-ಮೌಂಟೆಡ್ ಫ್ಯಾನ್ ಗಳಂತಹ ವಿವಿಧ ಫ್ಯಾನ್ ಮಾಡಲ್ ಗಳಿಗೆ ಪೇಂಟ್ ಒದಗಿಸುತ್ತೇವೆ.
ನಾವು ಅಧಿಕ ಮ್ಯಾಟ್ ಫಿನಿಶ್ ಉಳ್ಳ, ಪ್ರತಿಫಲಿತವಾಗದ ಮತ್ತು ವೆಲ್ವೆಟ್, ಲೆದರ್ ಅಥವಾ ರೇಶ್ಮೆಯಂತಹ ನೋಟ ನೀಡುವ ಮೃದು ಅನುಭವ ನೀಡುವ ಕೋಟಿಂಗ್ ಗಳನ್ನು ಒದಗಿಸುತ್ತೇವೆ.
ಕನ್ಸೈ ನೆರೊಲ್ಯಾಕ್ ನ ಸಾಫ್ಟ್ ಫೀಲ್ ಕೋಟಿಂಗ್ ಗಳು (ಮೃದು ಅನುಭವ ನೀಡುವ ಕೋಟಿಂಗ್ ಗಳು) ನಿಮ್ಮ ಕೋಟಿಂಗ್ ಬೇಡಿಕೆಗಳಿಗೆ ಅನುಗುಣವಾಗಿ ಹಲವಾರು ಉಪಾಯಗಳನ್ನು ನೀಡುತ್ತದೆ. ನಮ್ಮ ಉತ್ಪಾದನೆಗಳು ಗ್ರಾಹಕ ಎಲೆಕ್ಟ್ರಾನಿಕ್ ಕೋಟಿಂಗ್ ಗಳಲ್ಲಿ ಅತ್ಯುತ್ತಮವಾಗಿದ್ದು, ವಿನ್ಯಾಸಗಾರರಿಗೆ, ಉತ್ಪಾದಕರಿಗೆ ಮತ್ತು ಬಣ್ಣ ಹಚ್ಚುವವರಿಗೆ ಒಟ್ಟು ಫಿನಿಶಿಂಗ್ ಪರಿಹಾರ ನೀಡುತ್ತವೆ. ನಾವು ಒದಗಿಸುವುದೆಲ್ಲವನ್ನೂ ನೋಡಲು ಪರಿಹಾರಗಳ ಪಟ್ಟಿಯನ್ನು ಓದಿ.
- ಕಾರ್ ಡ್ಯಾಶ್ ಬೋರ್ಡ್ ಗಳು
- ಬಾಳಿಕೆ
- ಎಲೆಕ್ಟ್ರಿಕ್ ವಾಚ್ ಗಳು ಮತ್ತು ಸ್ವಿಚ್ ಬೋರ್ಡ್ ಗಳು
- ರಿಸ್ಟ್ ವಾಚ್ ಗಳ ಸ್ಟ್ರಾಪ್ ಗಳು ಮತ್ತು ಪೆನ್ನುಗಳು
- ಸೆಲ್ ಫೋನ್ ಗಳು ಮತ್ತು ಐಪಾಡ್ ಗಳು
- ಟಿ.ವಿ. ಕ್ಯಾಬಿನೆಟ್ ಗಳು ಮತ್ತು ರಿಮೋಟ್ ಕಂಟ್ರೋಲ್ ಕೇಸ್ ಗಳು
- ಕಂಪ್ಯೂಟರ್ ಕೀಬೋರ್ಡ್ ಮತ್ತು ಮೌಸ್ ಕೇಸ್ ಗಳು
- ಸನ್ ಗ್ಲಾಸ್ ಗಳು ಮತ್ತು ಕ್ಯಾಮೆರಾಗಳು
- ಆಡಿಯೋ ಬಿಡಿಭಾಗಗಳು
- ಬಾಟಲ್ ಕ್ಯಾಪ್ ಗಳು
ವಾಣಿಜ್ಯ ಗಾಜಿನ ಮೇಲ್ಮೈಗಳ ಮೇಲೆ ಅಲಂಕಾರಕ್ಕಾಗಿ ಹಚ್ಚಲು ಮತ್ತು ಕಾಸ್ಮೆಟಿಕ್ಸ್, ಸುಗಂಧ ದ್ರವ್ಯ ಮತ್ತು ಮದ್ಯದ ಕೈಗಾರಿಕೆಗಳಲ್ಲಿ ಗಾಜಿನ ವಸ್ತುಗಳನ್ನು ರಕ್ಷಿಸುವುದಕ್ಕಾಗಿ ಗ್ಲಾಸ್ ಕೋಟಿಂಗ್ ಗಳನ್ನು ಒದಗಿಸುತ್ತೇವೆ. ಗ್ಲಾಸ್ ಕೋಟಿಂಗ್ ಗಳು ಗಾಜನ್ನು ಬಲಗೊಳಿಸುತ್ತವೆ ಮತ್ತು ಸುರಕ್ಷಿತವಾಗಿ ಕಾಪಾಡುತ್ತವೆ.
ಅಕ್ರೈಲಿಕ್ ರೆಸಿನ್ ಗಳನ್ನು ಆಧರಿಸಿ ಹಲವಾರು ಪ್ರಕಾರದ ಕೋಟಿಂಗ್ ಗಳನ್ನು ನೀಡುತ್ತೇವೆ. ಈ ಕೋಟಿಂಗ್ ಗಳು ಸಿಂಗಲ್ ಕೋಟ್, ಸಿಂಗಲ್ ಕಂಪೋನೆಂಟ್, ಬೇಗನೇ ಒಣಗುವ ಮತ್ತು ಫೋರ್ಸ್ಡ್ ಡ್ರೈಯಿಂಗ್ ಪ್ರಕಾರದ ಕೋಟಿಂಗ್ ಗಳಾಗಿದ್ದು, ಇಂಜೆಕ್ಷನ್ ಮೋಲ್ಡಿಂಗ್ ದೋಷಗಳನ್ನು ಮುಚ್ಚಲು ಕ್ಯಾಬಿನೆಟ್ ಮುಂಭಾಗದ ಮೇಲೆ ಹಚ್ಚಲಾಗುತ್ತದೆ.
ಮಿರರ್ ಬ್ಯಾಕಿಂಗ್ ಕೋಟಿಂಗ್ ಗಳನ್ನು ಎ.ಐ. ನ ಲೋಹದ ಪದರನ್ನು ರಕ್ಷಿಸುವುದಕ್ಕಾಗಿ ಹಚ್ಚಲಾಗುತ್ತದೆ. ಇದು ಮಿರರ್ ಎಫೆಕ್ಟ್ ನೀಡುತ್ತದೆ. ಅಲ್ಲದೇ ಇದು ಲೋಹದ ಪದರುಗಳನ್ನು ಸವಕಳಿಯಾಗದಂತೆ ಮತ್ತು ಯಾಂತ್ರಿಕ ಕೊರೆತಗಳಿಂದ ರಕ್ಷಿಸುತ್ತದೆ. ಈ ಪೇಂಟನ್ನು ಸುರಿಯುತ್ತಿರುವಾಗ ಅದರ ಮುಖಾಂತರ ಕನ್ನಡಿಯನ್ನು ಹಾಯಿಸುವ ಮೂಲಕ ಹಚ್ಚಬಹುದು ಅಥವಾ ರೋಲರ್ ಪೇಂಟ್ ಕೋಟರ್ ಮೂಲಕ ಹಚ್ಚಬಹುದು.
ಹಚ್ಚುವ ವಿಧಾನಕ್ಕೆ ತಕ್ಕಂತೆ ಅನೇಕ ಮಿರರ್ ಬ್ಯಾಕಿಂಗ್ ಪೇಂಟ್ ಉತ್ಪಾದನೆಗಳನ್ನು ನಾವು ಒದಗಿಸುತ್ತೇವೆ. ಸಿಂಗಲ್ ಅಥವಾ ಡಬಲ್ ಕೋಟ್ ಆಗಿ ಹಚ್ಚಬಹುದಾದ ಪೇಂಟ್ ಸಿಸ್ಟಮ್ ಗಳನ್ನು ಕೂಡ ನಾವು ಒದಗಿಸುತ್ತೇವೆ.
ಕನ್ಸೈ ನೆರೊಲ್ಯಾಕ್ ನಲ್ಲಿ, ಆಫ್ ಶೋರ್ ಕೋಟಿಂಗ್ ಗಳು ಸಾಕಷ್ಟು ಬೆಳವಣಿಗೆ ಹೊಂದಿವೆ. ನಮ್ಮ ಹಚ್ಚುವ ಕ್ರಮಗಳು ಶೀಘ್ರವಾಗಿವೆ, ಹೆಚ್ಚು ವಾತಾವರಣ ಸಹಿಷ್ಣುಗಳಾಗಿವೆ ಮತ್ತು ಯು ಎಚ್ ಬಿ ಗಾಗಿ ಕಡಿಮೆ ಕೋಟ್ ಗಳ ಅಗತ್ಯವಿರುತ್ತದೆ ಹಾಗೂ ಪರಿಸರ ಸ್ನೇಹಿ, ಆರೋಗ್ಯಕರ ಮತ್ತು ಸುರಕ್ಷಿತವಾಗಿವೆ.
- ಅಗ್ನಿ ನಿರೋಧಕ ಫೈಲಿಂಗ್ ಕ್ಯಾಬಿನೆಟ್
- ಡಿಫೆಂಡರ್ ಸೇಫ್ ಗಳು/ಪ್ರಬಲ ಬಾಗಿಲುಗಳು
- ಸುರಕ್ಷಿತ ಡಿಪಾಸಿಟ್ ಲಾಕರ್ ಸಿಸ್ಟಮ್
- ಎಟಿಎಮ್ ಸೇಫ್ ಗಳು
ಗ್ರಾಹಕರ ಬೇಡಿಕೆಗೆ ತಕ್ಕಂತೆ ನಾವು ಅಲ್ಕೈಡ್ ಅಮೈನೊ, ಅಲ್ಕೈಡ್ ಪಾಲಿಯೆಸ್ಟರ್ ಎಪಾಕ್ಸಿ ಅಮೈನೊ, ಬೇಗನೇ ಒಣಗುವ ಅಲ್ಕೈಡ್ ಮತ್ತು ಎನ್ ಸಿ ಸಿಸ್ಟಮ್ ಗಳನ್ನು ಆಧರಿಸಿ ವಿವಿಧ ಕೋಟಿಂಗ್ ಗಳನ್ನು ಒದಗಿಸುತ್ತೇವೆ.
ಇವು ಲಿಫ್ಟ್ ಗಳಿಗೆ ಹಚ್ಚಬಹುದಾದ ಕೋಟಿಂಗ್ ಗಳು, ಇವುಗಳಲ್ಲಿ:
- ಕಾಸ್ಟಿಂಗ್ ಬಾಡಿ
- ಎಮ್ಎಸ್ ಕಂಪೋನೆಂಟ್ ಗಳು (ಮಷೀನ್ ಕವರ್)
- ಎಮ್ ಎಸ್ ಲಿಫ್ಟರ್ ಇರುತ್ತವೆ.
ಕಾಸ್ಟಿಂಗ್ ಬಾಡಿ ಮತ್ತು ಮಶೀನ್ ಕವರ್ ಗಳನ್ನು ಹಳದಿ, ಹಸಿರು, ಕಿತ್ತಳೆ ಮತ್ತು ಕೆಂಪು ಬಣ್ಣಗಳಿಂದ ಪೇಂಟ್ ಮಾಡಲಾಗುತ್ತದೆ. ಎಮ್ಎಸ್ ಲಿಫ್ಟರ್ ಅನ್ನು ಕಪ್ಪು ಬಣ್ಣದಿಂದ ಪೇಂಟ್ ಮಾಡಲಾಗುತ್ತದೆ. ಇವುಗಳು ಏರ್-ಡ್ರೈಯಿಂಗ್ ಕೋಟಿಂಗ್ ಗಳಾಗಿದ್ದು, ಶೀಘ್ರ ಒಣಗುವ ಅಲ್ಕೈಡ್ ಗಳನ್ನು ಅಥವಾ ಟೂ-ಕಾಂಪ್ ಅಕ್ರೈಲಿಕ್ ಸಿಸ್ಟಮ್ ಗಳನ್ನು ಆಧರಿಸಿರುತ್ತವೆ.
ಕೃಷಿ ಉಪಕರಣಕ್ಕಾಗಿ ನಾವು ಮುಂದುವರಿದ ಫಿನಿಶ್ ಗಳನ್ನು ಒದಗಿಸುತ್ತೇವೆ. ನಮ್ಮ ಹೊಸ ಕೋಟಿಂಗ್ ಆಧುನಿಕ ಉಪಕರಣದ ಬಾಳಿಕೆ ಮತ್ತು ನೋಟವನ್ನು ಹೆಚ್ಚಿಸುತ್ತದೆ. ಜೊತೆಗೆ ಉತ್ಪಾದನಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಉಳಿತಾಯ ಮಾಡಲು ಸಹಾಯ ಮಾಡುತ್ತದೆ.
ನಾವು ಅಕ್ರೈಲಿಕ್ ಮತ್ತು ಅಲ್ಕೈಡ್ ಕೋಟಿಂಗ್ ಗಳಲ್ಲಿ ಸಾಕಷ್ಟು ವಿಧಗಳನ್ನು ನೀಡುತ್ತಿದ್ದು, ಅವು ಮಾರುಕಟ್ಟೆ ವರ್ಗದಲ್ಲಿ ಬರುವ ಟ್ಯ್ರಾಕ್ಟರ್ ಗಳು, ಸೀಡರ್ ಗಳು, ಬೇಲರ್ ಗಳು, ಫರ್ಟಿಲೈಜರ್ ಸ್ಪ್ರೆಡರ್, ಕಮರ್ಷಿಯಲ್ ಮವಿಂಗ್ ಮತ್ತು ನೇಗಿಲು ಉಪಕರಣ ಹಾಗೂ ಹಾರ್ವೆಸ್ಟರ್ ಗಳನ್ನು ಒಳಗೊಂಡು ಹಲವಾರು ಕೃಷಿ ಉಪಕರಣಗಳಿಗೆ ಫಿನಿಶಿಂಗ್ ನೀಡಲು ವ್ಯಾಪಕವಾಗಿ ಉಪಯೋಗಿಸಲಾಗುತ್ತವೆ. ಏಕೆಂದರೆ ಈ ಉತ್ಪಾದನೆಗಳನ್ನು ಕಡಿಮೆ ಬೆಲೆಯಲ್ಲಿ ಸವಕಳಿಯಿಂದ ರಕ್ಷಿಸುವ, ಬಾಳಿಕೆ ಬರುವಂತೆ ಮಾಡುವ ಮತ್ತು ಚೆನ್ನಾಗಿ ಕಾಣುವಂತೆ ನೋಡಿಕೊಳ್ಳುವ ಅಗತ್ಯವಿರುತ್ತದೆ. ಹೈ-ಗ್ಲಾಸ್, ಏರ್-ಡ್ರೈ ಅಲ್ಕೈಡ್ ಎನಾಮಲ್ ಗಳು ಕೃಷಿ ಉಪಕರಣಕ್ಕಾಗಿ ಇರುವ ಉತ್ತಮ ಟಾಪ್ ಕೋಟ್ ಗಳಾಗಿ ಕೆಲಸ ಮಾಡಬಲ್ಲವು. ಏಕೆಂದರೆ ಅವು ಹೊಳಪನ್ನು ಕಾಪಾಡುತ್ತವೆ ಮತ್ತು ಅತ್ಯುತ್ತಮ ರಸಾಯನ, ಒತ್ತಡ ಮತ್ತು ಚಿಪ್ ನಿರೋಧಕಗಳಾಗಿರುತ್ತವೆ.
ಕಾಸ್ಟಿಂಗ್ ಗಳನ್ನು ಮೃದು ಉಕ್ಕು, ಅಲುಮಿನಿಯಂ ಮತ್ತು ಅಲಾಯ್ ಗಳಿಂದ ಮಾಡಲಾಗಿರುತ್ತದೆ. ಪೇಂಟಿಂಗ್ ಮಾಡುವ ಮುಂಚೆ ಮೇಲ್ಮೈಯನ್ನು ಸಿದ್ಧಗೊಳಿಸುವಾಗ ಇವು ಭಾರವಾದ ಬ್ಲಾಕ್ ಗಳಾಗಿರುತ್ತವೆ ಮತ್ತು ಶಾಟ್ ಬ್ಲಾಸ್ಟೆಡ್ ಮಾಡಲಾಗುತ್ತದೆ. ಶಾಟ್ ಬ್ಲಾಸ್ಟ್ ಮಾಡಲಾದ ಕಂಪೊನೆಂಟ್ ಗಳು ವಾತಾವರಣದ ಪರಿಸ್ಥಿತಿಗಳಿಗೆ ಸಂವೇದನಶೀಲವಾಗಿರುತ್ತವೆ ಮತ್ತು ಬೇಗನೇ ಸವಕಳಿಯಾಗುತ್ತವೆ. ಮೇಲ್ಮೈಯನ್ನು ರಕ್ಷಿಸುವುದಕ್ಕಾಗಿ ಕಾಸ್ಟಿಂಗ್ ಗಳನ್ನು ವಿವಿಧ ಬಣ್ಣದ ಸೀಲರ್ ಕೋಟ್ ಗಳಿಂದ ಪೇಂಟ್ ಮಾಡಲಾಗಿರುತ್ತದೆ. ಈ ಪೇಂಟ್ ಮಾಡಿದ ಕಾಸ್ಟಿಂಗ್ ಗಳನ್ನು ಟ್ಯ್ರಾಕ್ಟರ್ ಕೈಗಾರಿಕೆಗಳು, ಟ್ರಕ್ ಕೈಗಾರಿಕೆಗಳು ಅಥವಾ ಯಂತ್ರದ ಕೈಗಾರಿಕೆಗಳಂತಹ ಮುಖ್ಯ ಬಳಕೆದಾರರಿಗೆ ಸ್ಥಳಾಂತರಿಸಲಾಗುತ್ತದೆ. ಅನಂತರ ಬಳಕೆದಾರರ ಬೇಡಿಕೆಗೆ ತಕ್ಕಂತೆ ಇವುಗಳಿಗೆ ಮತ್ತೊಮ್ಮೆ ಲೋ ಬೇಕ್ ಎನಾಮಲ್, ಪಿಯು ಟಾಪ್ ಕೋಟ್ ಗಳು ಇತ್ಯಾದಿ ವಿವಿಧ ಪ್ರಕಾರದ ಪೇಂಟ್ ಗಳನ್ನು ಹಚ್ಚಲಾಗುತ್ತದೆ.
ಪಿಇಬಿ ಕೈಗಾರಿಕೆಯಲ್ಲಿ ಸಾಟಿಯಿಲ್ಲದ ಮಾರುಕಟ್ಟೆ ಅಧಿಪತಿ. ಎಲ್ಲ ಪ್ರಧಾನ ಪಿಇಬಿ ಉತ್ಪಾದಕರಿಗೆ 100% ಪೂರೈಕೆದಾರರಾಗಿ ಸೇವೆ ಸಲ್ಲಿಸುತ್ತಿದ್ದೇವೆ.
ಈ ಪ್ರೀ-ಎಂಜಿನಿಯರ್ಡ್ ಕಟ್ಟಡಗಳಿಗೆ ಭಾರತದಲ್ಲಿ ಸಾಕಷ್ಟು ಪ್ರಾಮುಖ್ಯತೆ ಇದೆ. ಏಕೆಂದರೆ, ಅವು ಅತ್ಯಂತ ಅವಶ್ಯಕವಾದ ಮನೆ, ಶೈಕ್ಷಣಿಕ ಮತ್ತು ಆರೋಗ್ಯ ಕಾಳಜಿ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಕೈಗಾರಿಕಾ ಕಟ್ಟಡಗಳು ಮತ್ತು ಶೀತಾಗಾರಗಳಂತಹ ಕಟ್ಟಡಗಳ ಕೊರತೆಯನ್ನು ನೀಗಿಸುತ್ತವೆ. ಈ ಪರಿಕಲ್ಪನೆಯು ನಿರ್ಮಾಣ ಕೈಗಾರಿಕೆಯಲ್ಲಿ ವಿಶಿಷ್ಟ ಸ್ಥಳ ಹೊಂದಿದ್ದು, ಆಧುನಿಕ ಎಂಜಿನಿಯರಿಂಗ್ ಕ್ಷೇತ್ರದ ಬೇಡಿಕೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುತ್ತದೆ. ಉಕ್ಕು ಗುಣಮಟ್ಟ, ಸುಂದರ ನೋಟ, ಮಿತವ್ಯಯ ಮತ್ತು ಪರಿಸರ ಪರಿಸ್ಥಿತಿಗಳಂತಹ ವಿವಿಧ ಅನುಕೂಲಗಳನ್ನು ಹೊಂದಿರುವುದರಿಂದ ಅದನ್ನು ನಿರ್ಮಾಣ ಕಾರ್ಯಗಳಲ್ಲಿ ಹೆಚ್ಚು ಉಪಯೋಗಿಸಲಾಗುತ್ತದೆ.
ಕನ್ಸೈ ನೆರೊಲ್ಯಾಕ್ ನಲ್ಲಿ, ಪ್ರಿ-ಎಂಜಿನಿಯರ್ ಮಾಡಲಾದ ಕಟ್ಟಡಗಳಿಗೆ ಅಗತ್ಯವಿರುವ ಕೋಟಿಂಗ್ ಅಗತ್ಯಗಳನ್ನು ಅರಿತಿರುತ್ತೇವೆ ಮತ್ತು ಅದಕ್ಕೆ ತಕ್ಕಂತೆ ಹಲವಾರು ಉತ್ಪನ್ನಗಳನ್ನು ಒದಗಿಸುತ್ತೇವೆ. ಪ್ರೈಮರಿ ಮತ್ತು ಸೆಕೆಂಡರಿ ಸ್ಟೀಲ್ ಗಳಿಗೆ ಹಚ್ಚುವ ರೆಡ್ ಆಕ್ಸೈಡ್ ಪೇಂಟ್ ನಿಂದ ಹಿಡಿದು ಸವಕಳಿ ಆಗದಂತೆ ತಡೆಯಲು ಉಕ್ಕಿಗೆ ಹಚ್ಚುವ ವಿಶೇಷ ಪೇಂಟ್ ಗಳವರೆಗೆ ಉತ್ಪಾದನೆಗಳು ದೊರೆಯುತ್ತವೆ.
- ಸೈಕಲ್ ಕೈಗಾರಿಕೆಗಳು
- ವಿದ್ಯುತ್ ರೈಸ್ ಕುಕ್ಕರ್ ಗಳು
- ಹ್ಯಾಕ್ ಸಾ ಬ್ಲೇಡ್ ಗಳು
- ಹೊಲಿಗೆ ಯಂತ್ರಗಳು
- ಜನರೇಟರ್ ಸೆಟ್ ಗಳು