ಭಾಷೆಗಳು

Buy
X
Get in touch
 
1 Start 2 Complete
X
Get in touch
 
1 Start 2 Complete
Send OTP
ಸಲ್ಲಿಸಿ

ಅಪ್ಲಿಕೇಶನ್ ವಿವರಗಳು

Application Details

ಮೇಲ್ಮೈ ಪರಿಸ್ಥಿತಿ ಮತ್ತು ತಯಾರಿ ಹಾಗೂ ಸಂಧಿ/ತಗ್ಗು ತುಂಬುವಿಕೆ

ಫ್ಲೋರ್‍ ಕೋಟಿಂಗ್ ಸಿಸ್ಟಮ್ ನ ಯಶಸ್ಸು ಮತ್ತು ಬಾಳಿಕೆ ಮುಖ್ಯವಾಗಿ ಪ್ರಸ್ತುತ ನೆಲದ ಪರಿಸ್ಥಿತಿ ಮತ್ತು ಮೇಲ್ಮೈ ಸಿದ್ಧತೆಯನ್ನು ಅವಲಂಬಿಸಿರುತ್ತದೆ.

ಕಾಂಕ್ರೀಟ್ ಸಬ್ ಸ್ಟ್ರೇಟ್ ಸ್ವಚ್ಛ, ಗಟ್ಟಿ ಮತ್ತು ಒಣಗಿದ್ದಷ್ಟೂ ಅದರ ಮತ್ತು ಫ್ಲೋರಿಂಗ್ ಹೆಚ್ಚು ಉತ್ತಮವಾಗಿ ಜೋಡಣೆಯಾಗಿರುತ್ತವೆ. ಪ್ರೈಮರ್‍ ಹಚ್ಚುವ ಮುಂಚೆ ಹೊಸ ಕಾಂಕ್ರೀಟ್ ಮೇಲ್ಮೈ ಕನಿಷ್ಠ 20 ದಿನ ಹಳೆಯದಾಗಿರಬೇಕು, ಕ್ಯೂರಿಂಗ್ ಕಂಪೌಂಡ್ ಗಳಿಂದ ಮತ್ತು ಸೀಲರ್‍ ಗಳಿಂದ ಮುಕ್ತವಾಗಿರಬೇಕು, ತೇವಾಂಶದಿಂದ ಮುಕ್ತವಾಗಿರಬೇಕು ಮತ್ತು 5% ಕ್ಕಿಂತ ಕಡಿಮೆ ತೇವಾಂಶ ಇರಬೇಕು. ಹಳೆಯ ಕಾಂಕ್ರೀಟ್ ಮೇಲ್ಮೈ ಹಸಿಯಾಗಿರಬಾರದು ಮತ್ತು ತೇವ ಹೊಂದಿರಬಾರದು, ಎಣ್ಣೆಯ ಮಾಲಿನ್ಯ ಮತ್ತು ಥರ್ಮೊಪ್ಲಾಸ್ಟಿಕ್ ಕೋಟಿಂಗ್ ಗಳನ್ನು ಹೊಂದಿರಬಾರದು.

ನೆಲದ ಮೇಲಿನ ಎಣ್ಣೆಯ ಕಲ್ಮಶಗಳನ್ನು ತೆಗೆಯಲು ಅಗತ್ಯ ರಾಸಾಯನಿಕ/ಸಾಲ್ವಂಟ್ ಶುದ್ಧೀಕರಣ ಅಥವಾ ಫ್ಲೇಮ್ ಕ್ಲೀನಿಂಗ್ ಮೂಲಕ ಮೇಲ್ಮೈ ಮೇಲೆ ಎಣ್ಣೆ ಇರದಂತೆ ಮಾಡಿ ಅದನ್ನು ಪ್ರೈಮರ್‍ ಕೋಟ್ ಹಚ್ಚಲು ಸೂಕ್ತವಾಗಿಸಲಾಗುತ್ತದೆ. ಆದರೆ ಪೇಂಟ್ ಸಿಸ್ಟಮ್ ಸೂಚನೆಗಳು ಮತ್ತು ಅಪ್ಲಿಕೇಶನ್ ಗಳ ಮುಂಚೆ ಅಂತಹ ಎಣ್ಣೆಯುಕ್ತ ನೆಲದ ಪರಿಶೀಲನೆ ನಡೆಸಬೇಕು.

ಪ್ರೈಮರ್‍ ಕೋಟ್: ಮೇಲ್ಮೈ ಮೇಲೆ ಧೂಳು, ಮಣ್ಣು ಇರಬಾರದು ಮತ್ತು ಅದು ಒಣಗಿದ್ದರೆ, ನೆಲದ ಮೇಲೆ ಎಪಾಕ್ಸಿ ಪ್ರೈಮರ್‍ ಕೋಟ್ ನ ಮೊದಲನೇ ಕೋಟ್ ಹಚ್ಚುವುದು ಸೂಕ್ತ ಮತ್ತು ಅನಂತರ ಅದನ್ನು ಒಣಗಲು ಬಿಡಬೇಕು.

ಎಪಾಕ್ಸಿ ಸ್ಕ್ರೀಡ್ ಲೇಯರ್: ಪ್ರೈಮ್ ಕೋಟ್ ಒಣಗಿದ ನಂತರ ಸೂಚಿತ ಫ್ಲೋರ್‍ ಪೇಂಟ್ ಸಿಸ್ಟಮ್ ಪ್ರಕಾರ ಸೂಕ್ತ ದಪ್ಪದ ಎಪಾಕ್ಸಿ ಸ್ಕ್ರೀಡ್ ಲೇಯರ್‍ ಹಚ್ಚಲಾಗುತ್ತದೆ.

ಸಾಫ್ಟ್ ಗ್ರೈಂಡಿಂಗ್: ಟಾಪ್ ಕೋಟ್ ನ ಅತ್ಯುತ್ತಮ ಫಿನಿಶ್ ಗಾಗಿ ನುಣುಪಾದ ಸಮತಲ ಮತ್ತು ಸ್ಕ್ರೀಡ್ ಲೇಯರ್‍ ನ ಕೋಟಿಂಗ್ ಮಟೀರಿಯಲ್ ನ ಸಡಿಲವಾದ ಕೋಟಿಂಗ್ ಅನ್ನು ತೆಗೆಯಲು ಅಗತ್ಯ ಸಾಫ್ಟ್ ಗ್ರೈಂಡಿಂಗ್ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ.

ಸೀಲರ್‍ ಕೋಟ್ ಅಥವಾ ಟಾಪ್ ಕೋಟ್: ನೆಲವನ್ನು ಸಾಫ್ಟ್ ಗ್ರೈಂಡ್ ಮತ್ತು ಸ್ವಚ್ಛ ಮಾಡಿದ ನಂತರ (ಗ್ರೈಂಡಿಂಗ್ ನಿಂದಾಗಿ ಕಾಣಿಸಿಕೊಂಡ ಧೂಳು). ಸೀಲರ್‍ ಕೋಟ್ ಅಥವಾ ಅಂತಿಮವಾಗಿ ಸೂಚಿಸಲಾದ ನಿರ್ದಿಷ್ಟ ದಪ್ಪಳತೆಯ ಟಾಪ್ ಕೋಟ್ ಹಚ್ಚಲಾಗುತ್ತದೆ ಮತ್ತು ಅನಂತರ ಅದನ್ನು ಕನಿಷ್ಠ 24 ಗಂಟೆಗಳವರೆಗೆ ಒಣಗಲು ಬಿಡಬೇಕು.

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ