ಭಾಷೆಗಳು

ಹೊಸ ಸ್ಟೈಲ್ ಗೈಡ್


ನೆರೊಲ್ಯಾಕ್ ಇಂಟೀರಿಯರ್‍ ಮತ್ತು ಎಕ್ಸ್ ಟೀರಿಯರ್‍ ಕಲರ್‍ ಗೈಡ್ ಗಳು ನಿಮ್ಮ ಮನೆಗಾಗಿ ಸೂಕ್ತ ಬಣ್ಣಗಳನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡುತ್ತವೆ. ಈ ಕಲರ್ ಗೈಡ್‌ಗಳಲ್ಲಿ ಆಧುನಿಕ ಶೈಲಿಯ ಮನೆಗಳಿಗೆ ತಕ್ಕ ಸ್ಫೂರ್ತಿದಾಯಕ ಸುಂದರ ಬಣ್ಣಗಳು ದೊರೆಯುತ್ತವೆ. ಜೊತೆಗೆ ನಾವು ಹಿಂದೆ ಉಪಯೋಗಿಸಿದ ಬಣ್ಣಗಳು ಫರ್ನಿಚರ್‍ ಗಳ ಮೇಲೆ ನೋಡಲು ದೊರೆಯುತ್ತವೆ. ನಮ್ಮ ಸದ್ಯದ ಇಂಟೀರಿಯರ್‍ ಗೆ ಹೊಸ ರೂಪ ನೀಡುವಂತಹ ಅತ್ಯುತ್ತಮ ಬಣ್ಣಗಳ ಸಂಗಮ ನಮಗೆ ಬೇಕು. ಇಲ್ಲಿ ನೀಡಿರುವ ಕಲರ್‍ ಗೈಡ್ ಅತ್ಯಂತ ಆಕರ್ಷಕ ಪ್ಯಾಲೆಟ್ ಗಳ ಜೊತೆಗೆ ಏಳು ಅತ್ಯಂತ ಪ್ರಸ್ತುತ ಥೀಮ್ ಆಧರಿತ ಸಲಹೆಗಳನ್ನು ಹೊಂದಿದೆ. ಬಣ್ಣಗಳು ನಮಗೆ ಹೇಗೆ ಪ್ರೇರಣೆ ನೀಡಬೇಕು ಮತ್ತು ಅವನ್ನು ನಮ್ಮ ಮನೆಯಲ್ಲಿ ಹೇಗೆ ಉಪಯೋಗಿಸಬೇಕು ಎಂಬುದನ್ನು ತಿಳಿಸುವ ಜೀವನಶೈಲಿಯ ಪರಿಕಲ್ಪನೆಗಳೇ ಥೀಮ್ ಗಳು. ಪ್ರತಿಯೊಂದು ಕಲರ್‍ ಪ್ಯಾಲೆಟ್ ಬಣ್ಣಗಳ ಕುಟುಂಬವನ್ನು ಪ್ರತಿನಿಧಿಸುತ್ತದೆ. ಈ ಬಣ್ಣಗಳನ್ನು ನೀವು ಸುಲಭವಾಗಿ ಮಿಕ್ಸ್ ಮತ್ತು ಮ್ಯಾಚ್ ಮಾಡಿ ನೋಡಿ ಉಪಯೋಗಿಸಬಹುದು. ಅಥವಾ ವಿಶೇಷ ಕೋಣೆಗಳಿಗೆ ವಿಭಿನ್ನ ಪ್ಯಾಲೆಟ್ ಗಳನ್ನು ಉಪಯೋಗಿಸಬಹುದು. ನೆರೊಲ್ಯಾಕ್ ದೇಶವನ್ನೆಲ್ಲ ಸುತ್ತಿ ಬರುವ ಮೂಲಕ ಅದರ ಭೂಪ್ರದೇಶ ಹೇಗೆ ಬದಲಾಗುತ್ತಿದೆ ಎಂಬುದನ್ನು ತಿಳಿದುಕೊಂಡಿದೆ. ಈ ಪುಸ್ತಕದಲ್ಲಿ ನಗರದ ಭಾರತೀಯ ಮನೆಗೆ ಬೇಕಾದ ಪ್ರೇರಣಾದಾಯಕ ಬಣ್ಣಗಳು ದೊರೆಯುತ್ತವೆ. ನಾವು ಮನೆಗೆ ಮೊದಲ ಬಾರಿಗೆ ಅಥವಾ ಮತ್ತೊಮ್ಮೆ ಬಣ್ಣ ಹಚ್ಚುವಾಗ, ಸೂಕ್ತ ಪ್ರೇರಣೆಗಾಗಿ ಹುಡುಕುತ್ತಿರುತ್ತೇವೆ. ಮನೆ ಮತ್ತು ಅದರ ಸುತ್ತಮುತ್ತಲಿನ ವಾಸ್ತುಶಿಲ್ಪವನ್ನು ಅರಿತುಕೊಳ್ಳಿ. ಏಳು ವಿಶಿಷ್ಟ ಬಣ್ಣಗಳಿಂದ ಸರಿಯಾದ ಕಲರ್‍ ಪ್ಯಾಲೆಟ್ ಆಯ್ದುಕೊಳ್ಳಿ.

ಈವೆಂಟ್ ಫೋಟೋಗಳು

ಇಂಟೀರಿಯರ್‍ ಬಣ್ಣಕ್ಕಾಗಿ ಮಾರ್ಗದರ್ಶಿ

ಎಕ್ಸ್ ಟೀರಿಯರ್‍ ಬಣ್ಣಕ್ಕಾಗಿ ಮಾರ್ಗರ್ಶಿ

SEND US YOUR QUERIES

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ